Search
  • Follow NativePlanet
Share
» »ಮಹಾಬಲೇಶ್ವರಕ್ಕೆ ಹೋದ್ರೆ ಇದನ್ನೆಲ್ಲಾ ಮಿಸ್ ಮಾಡೋಕಾಗುತ್ತಾ?

ಮಹಾಬಲೇಶ್ವರಕ್ಕೆ ಹೋದ್ರೆ ಇದನ್ನೆಲ್ಲಾ ಮಿಸ್ ಮಾಡೋಕಾಗುತ್ತಾ?

ಮಹಾಬಲೇಶ್ವರಕ್ಕೆ ಹೋಗುವ ದಾರಿಯಲ್ಲಿ ಅನೇಕ ಪ್ರವಾಸಿ ತಾಣಗಳು ದೊರೆಯುತ್ತವೆ. ಪ್ರಕೃತಿ ಸೌಂದರ್ಯದ ಜೊತೆಗೆ ಎತ್ತರದ ಮರಗಳು ಮತ್ತು ಹಸಿರಿನಿಂದ ಸುತ್ತುವರಿದ ಮಹಾಬಲೇಶ್ವರದಲ್ಲಿರುವ ವೆನ್ನಾ ಸರೋವರವು ಪಟ್ಟಣದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಸರೋವರದ ಸುತ್ತಲೂ ಆವೃತವಾದ ಹಚ್ಚ ಹಸಿರಿನ ದೃಶ್ಯಾವಳಿ ಆನಂದಿಸಿ.

ಮಹಾಬಲೇಶ್ವರ ವ್ಯೂ ಪಾಯಿಂಟ್‌

ಮಹಾಬಲೇಶ್ವರ ವ್ಯೂ ಪಾಯಿಂಟ್‌

PC: Bemax1234

ಮಹಾಬಲೇಶ್ವರದಲ್ಲಿ ಸುಮಾರು 25 ವ್ಯೂ ಪಾಯಿಂಟ್‌ಗಳಿವೆ. ಪ್ರತಿಯೊಂದೂ ಕಣಿವೆಯ ಅದ್ಭುತ ನೋಟವನ್ನು ನೀಡುತ್ತದೆ. ಇಲ್ಲಿಂದ ದೂರದ ಪ್ರದೇಶಗಳನ್ನು ನೋಡಬಹುದು. ಈ ಪಾಯಿಂಟ್‌ಗಳು ನಿಮಗೆ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಎತ್ತರದ ಸ್ಥಳದಿಂದ ತೋರಿಸುತ್ತದೆ.

ಶಾಪಿಂಗ್ ಮಾಡೋದನ್ನು ಮರೆಯುವಂತಿಲ್ಲ

ಶಾಪಿಂಗ್ ಮಾಡೋದನ್ನು ಮರೆಯುವಂತಿಲ್ಲ

ಪೂರ್ವಸಿದ್ಧ ಮತ್ತು ಸಂರಕ್ಷಿತ ಜಾಮ್ , ಫ್ರೆಶ್‌ ಸ್ಟ್ರಾಬೆರಿ ಮತ್ತು ಜೇನುತುಪ್ಪವು ಮಹಾಬಲೇಶ್ವರದಲ್ಲಿ ಕೊಂಡುಕೊಳ್ಳಲೇ ಬೇಕಾದಂತಹವುಗಳು. ಇವುಗಳಲ್ಲಿ ಯಾವುದಾದರೂ ವಸ್ತುಗಳನ್ನು ಖರೀದಿಸಲು ನೀವು ಬಯಸುತ್ತಿದ್ದಲ್ಲಿ ಟೌನ್ ಬಜಾರ್, ಇಂಪೀರಿಯಲ್ ಸ್ಟೋರ್ಸ್ ಮತ್ತು ಮ್ಯಾಪ್ರೊ ಗಳಿಗೆ ಭೇಟಿ ನೀಡಬಹುದು. ಸ್ಟ್ರಾಬೆರಿಗಳು ಮತ್ತು ರಾಸ್ಬೇರ್ರಿಗಳು ಎಲ್ಲೆಡೆಯೂ ಸಮೃದ್ಧವಾಗಿ ಲಭ್ಯವಿರುತ್ತವೆ ಮತ್ತು ಸರ್ಕಾರಿ ಪ್ರಾಯೋಜಿತ ಜೇನಿನ ಫಾರ್ಮ್‌ಗಳಿಂದ ನೀವು ಜೇನುತುಪ್ಪವನ್ನು ತೆಗೆದುಕೊಳ್ಳಬಹುದು.

ಮ್ಯಾಪ್ರೋ ಗಾರ್ಡನ್‌

ಮ್ಯಾಪ್ರೋ ಗಾರ್ಡನ್‌

PC:Bharat Bang

ಪಂಚಗಣಿಗೆ ಹೋಗುವ ಮಾರ್ಗದಲ್ಲಿ ಮ್ಯಾಪ್ರೋ ಗಾರ್ಡನ್‌ಗೆ ಭೇಟಿ ನೀಡಬಹುದು. ವಿವಿಧ ಜ್ಯಾಮ್‌ಗಳನ್ನು ಇಲ್ಲಿ ಬೆಳೆಸಲಾಗುತ್ತದೆ ಮತ್ತು ಮಾರಾಟ ಮಾಡುತ್ತವೆ. ಆದರೆ ನೀವು ತಾಜಾ ಸಲಾಡ್‌ಗಳು ಮತ್ತು ಹಣ್ಣಿನ ರಸದ ಆನಂದವನ್ನು ಪಡೆಯಬಹುದು. ಇಲ್ಲಿ ವಾರ್ಷಿಕ ಸ್ಟ್ರಾಬೆರಿ ಹಣ್ಣಿನ ಉತ್ಸವವನ್ನು ಏರ್ಪಾಟುಮಾಡಲಾಗುತ್ತದೆ.

ಕೊನಾಟ್ ಪೀಕ್

ಕೊನಾಟ್ ಪೀಕ್

ಮೂಲತಃ ಮೌಂಟ್ ಒಲಂಪಿಯಾ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶವು ಕೊನ್ನಾಟ್ ಪೀಕ್ ಎಂದು ಮರುನಾಮಕರಣಗೊಂಡಿತು. ಡ್ಯುಕ್ ಆಫ್ ಕಾನಟ್ ಈ ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲಿನ ಸೌಂದರ್ಯಕ್ಕೆ ಮಾರುಹೋಗಿದ್ದರು.

ಒಂಟೆ ಮತ್ತು ಕುದುರೆ ಸವಾರಿ

ಒಂಟೆ ಮತ್ತು ಕುದುರೆ ಸವಾರಿ

ಒಂಟೆ ಮತ್ತು ಕುದುರೆ ಸವಾರಿನೀವು ಕುದುರೆ ಅಥವಾ ಒಂಟೆಯ ಮೇಲೆ ಸವಾರಿ ಮಾಡಬಹುದು. ನೀವು ಸಾಹಸಪ್ರಿಯರಲ್ಲಿ ಒಬ್ಬರಾಗಿದ್ದರೆ ಇಲ್ಲಿನ ಒಂಟೆ ಸವಾರಿ ಕುದುರೆ ಸವಾರಿಯನ್ನು ಮಾಡಲೇ ಬೇಕು.

ಪ್ರತಾಪ್‌ಘಡ್ ಕೋಟೆ

ಪ್ರತಾಪ್‌ಘಡ್ ಕೋಟೆ

PC: Ikneet

ಪ್ರತಾಪ್‌ಘಡ್ ಕೋಟೆಗೆ ತೆರಳಿದರೆ ಮಹಾಬಲೇಶ್ವರ ಬೆಟ್ಟದ ಎತ್ತರಕ್ಕೆ ಏರಿದ ಅನುಭವವಾಗುತ್ತದೆ. ಇಲ್ಲೇ ಛತ್ರಪತಿ ಶಿವಾಜಿ ಮತ್ತು ಅಫ್ಜಲ್ ಖಾನ್ ನಡುವಿನ ಐತಿಹಾಸಿಕ ಯುದ್ಧ ನಡೆದಿದ್ದು. ಈ ಕೋಟೆಯು ಮಹಾಬಲೇಶ್ವರದ ಪಶ್ಚಿಮಕ್ಕೆ 24 ಕಿ.ಮೀ ದೂರದಲ್ಲಿದೆ ಮತ್ತು ಕೆಳಭಾಗದ ಕೋಟೆ ಮತ್ತು ಮೇಲ್ಭಾಗದ ಕೋಟೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕೋಟೆಯ ಸುತ್ತಲೂ ಸುಂದರ ಚಾರಣ ಮಾರ್ಗವಿದೆ. ಸುಮಾರು ಒಂದು ಘಂಟೆಯವರೆಗೆ ನಡೆದರೆ ಬೆಟ್ಟದ ತುದಿಗೆ ನಿಮ್ಮನ್ನು ಕರೆದೊಯ್ಯುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+