Search
  • Follow NativePlanet
Share
» »ಅಯೋಧ್ಯೆಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಅಯೋಧ್ಯೆಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಶ್ರೀರಾಮನ ಜನ್ಮಭೂಮಿ ಎಂದೇ ಹೇಳಲಾಗುವ ಅಯೋಧ್ಯೆಯು ಬಹಳ ಪ್ರಾಚೀನ ನಗರವಾಗಿದೆ. ಫೈಜಾಬಾದ್ ಎನ್ನುವ ಹೆಸರನ್ನು ಬದಲಾಯಿಸಿ ಅಯೋಧ್ಯ ಎಂದು ಇಡಲಾಯಿತು. ಇಲ್ಲಿನ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವನ್ನು ನೋಡಿ ಉತ್ತರ ಭಾರತ ಸರ್ಕಾರವು ಇದನ್ನು ಧಾರ್ಮಿಕ ಪ್ರವಾಸಿ ತಾಣವಾಗಿ ವಿಕಸನ ಮಾಡಲಾಗಿದೆ.

 ಹನುಮಾನ್ ಗಡಿ

ಹನುಮಾನ್ ಗಡಿ

ರಾಮನ ಜನ್ಮಸ್ಥಳವಾಗಿರುವ ಅಯೋಧ್ಯಾ ನಗರದಲ್ಲಿ ಹಲವು ಧಾರ್ಮಿಕ ಸ್ಥಳಗಳಿವೆ. ಹನುಮಾನ್ ಗಡಿ ಅವುಗಳೆಲ್ಲದರಲ್ಲೂ ಅತ್ಯಂತ ಮುಖ್ಯವಾಗಿದೆ. ಹನುಮಂತನಿಗೆ ಅರ್ಪಿತವಾದ ಈ ದೇವಾಲಯವನ್ನು 10 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಬೆಟ್ಟದ ಮೇಲಿರುವ ಈ ದೇವಸ್ಥಾನಕ್ಕೆ ಹೋಗಲು ನೀವು 76 ಮೆಟ್ಟಿಲುಗಳನ್ನು ಹತ್ತಬೇಕು. ದೇಶಾದ್ಯಂತದ ಭಕ್ತರು ಇಲ್ಲಿಗೆ ಬರುತ್ತಾರೆ.

ನಾಗೇಶ್ವರನಾಥ ಮಂದಿರ

ನಾಗೇಶ್ವರನಾಥ ಮಂದಿರ

ಈ ಮಂದಿರವನ್ನು ರಾಮನ ಮಗ ಕುಶ ನಿರ್ಮಿಸಿದನು ಎನ್ನಲಾಗುತ್ತದೆ. ಶಿವನಿಗೆ ಸಮರ್ಪಿತವಾದ ಈ ದೇವಾಲಯವು ಶಿವರಾತ್ರಿ ಹಾಗೂ ಇತರ ಶಿವನಿಗೆ ಸಂಬಂಧಿಸಿದ ಪೂಜೆಯ ದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಗುಲಾಬ್‌ವಾಡಿ

ಗುಲಾಬ್‌ವಾಡಿ

ಶುಜಾವುದೌಲರ ಸಮಾಧಿಯ ಸುತ್ತಲು ಗುಲಾಬಿಯ ತೋಟವನ್ನು ಕಾಣಬಹುದು. ವಿವಿಧ ರೀತಿಯ ಹೂವುಗಳಿವೆ. ಈ ಸ್ಥಳವು ಗುಲಾಬ್‌ಬಾಡಿ ಮಾತ್ರವಲ್ಲ ಇಮಾಮಾಬಾಡ ಹಾಗೂ ಮಸೀದಿಗೂ ಪ್ರಸಿದ್ಧವಾಗಿದೆ.

ಕನಕ ಭವನ

ಕನಕ ಭವನ

PC: Shalini Tomar
ಕನಕ ಭವನವನ್ನು ಚಿನ್ನದ ಮನೆ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಇಲ್ಲಿ ರಾಮ, ಸೀತೆ ಯ ಚಿನ್ನದ ಮುಕುಟಹೊಂದಿರುವ ಮೂರ್ತಿ ಇದೆ. ಇದೊಂದು ಸುಂದರವಾದ ಮಹಲ್‌ ಆಗಿದೆ. ಈ ಮಹಲ್‌ನ್ನು ಮಾತೆ ಕೌಶಲ್ಯ ರಾಮನ ಪತ್ನಿ ಸೀತೆಗೆ ಉಡುಗೊರೆಯಾಗಿ ನೀಡಿದ್ದು ಎನ್ನಲಾಗುತ್ತದೆ.

ದಶರಥ ಭವನ

ದಶರಥ ಭವನ

ನಗರದ ಮಧ್ಯಭಾಗದಲ್ಲಿರುವ ದಶರಥ ಭವನ್ ಅಯೋಧ್ಯೆಯ ರಾಜ ದಶರಥನ ಮನೆಯಾಗಿತ್ತು. ಇದೊಂದು ಭವ್ಯ ಮಹಲ್‌ ಆಗಿದ್ದು, ಬಹಳ ಸುಂದರವಾಗಿ ಅಲಂಕರಿಸಲಾಗಿದೆ.

ಮಣಿ ಪರ್ವತ

ಮಣಿ ಪರ್ವತ

ಮಣಿ ಪರ್ವತವು ಧಾರ್ಮಿಕ ಹಾಗೂ ಪೌರಾಣಿಕ ಮಹತ್ವವುಳ್ಳ ಸ್ಥಳವಾಗಿದೆ. ಲಕ್ಷ್ಮಣನು ಯುದ್ಧದಲ್ಲಿ ಗಾಯಗೊಂಡಿದ್ದಾಗ ಆತನಿಗೆ ಸಂಜೀವಿನಿ ಗಿಡಮೂಲಿಕೆಯನ್ನು ತರಲು ಹನುಮಂತನು ಇಡೀ ಪರ್ವತವನ್ನೇ ಎತ್ತುಕೊಂಡು ಬಂದನು. ಆಗ ಆ ಪರ್ವತದ ಒಂದು ಭಾಗ ಅಯೋಧ್ಯೆಯಲ್ಲಿ ಬಿದ್ದಿತ್ತು. ಅದನ್ನು ಮಣಿ ಪರ್ವತ ಎನ್ನುವ ಹೆಸರಿಂದ ಕರೆಯಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+