ಬೀದರ್ ಕರ್ನಾಟಕದ ಈಶಾನ್ಯ ಭಾಗದಲ್ಲಿರುವ ಒಂದು ನಗರವಾಗಿದ್ದು ಈ ನಗರವು ರಾಜ್ಯದ ಸ್ವಚ್ಛ ನಗರಗಳಲ್ಲಿ ಒಂದಾಗಿದೆ. ಇದನ್ನು ಕರ್ನಾಟಕದ ಶಿಖರವೆಂದೂ ಕರೆಯುತ್ತಾರೆ.
ಈ ನಗರದ ಇತಿಹಾಸವು ಕರ್ನಾಟಕದ ಇನ್ನಿತರ ನಗರಗಳಿಗಿಂತ ವಿಭಿನ್ನವಾಗಿದ್ದು ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಈ ಸ್ಥಳದ ಇತಿಹಾಸವು ಈ ನಗರವನ್ನು ಕರ್ನಾಟಕದ ಇತರ ನಗರಗಳಲ್ಲಿ ಜನಪ್ರೀಯಗೊಳಿಸಿದೆ. ಬೀದರ್ ಜಿಲ್ಲೆ ಆಂಧ್ರಪ್ರದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವುದರಿಂದ, ನಗರವು ಕರ್ನಾಟಕದ ನಗರಗಳಿಗಿಂತ ಹೈದರಾಬಾದ್‌ನಂತಹ ಆಂಧ್ರಪ್ರದೇಶದ ಕೆಲವು ಪ್ರಮುಖ ನಗರಗಳಿಗೆ ಹತ್ತಿರದಲ್ಲಿದೆ.

ಬೀದರ್ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಆಕರ್ಷಣೆಗಳು
ಬೀದರ್ ನಲ್ಲಿ ನಗರದ ಇತಿಹಾಸವನ್ನು ಹೇಳುವಂತಹ ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಅವುಗಳಲ್ಲಿ ಅತ್ಯುತ್ತಮವಾದುದೆಂದರೆ ಬೀದರ್ ನ ಕೋಟೆ. ಈ ನಗರದ ಇನ್ನಿತರ ಆಕರ್ಷಣೆಗಳಲ್ಲಿ ಸೋಲ ಕಂಬ ಮಸೀದಿ, ಗುಂಬಾದ್ ದರ್ವಾಜಾ, ನಾನಕ್ ಜಹಿರ ಸಾಹಿಬ್, ಪಾಪ ನಾಶಕ ದೇವಾಲಯ ಇತ್ಯಾದಿಗಳನ್ನು ಒಳಗೊಂಡಿದೆ.
ಬೀದರ್‌ನ ಜಾತ್ರೆಗಳು ಮತ್ತು ಹಬ್ಬಗಳುಬೀದರ್ ನಲ್ಲಿಯ ವಾರ್ಷಿಕ ಜಾತ್ರೆಯನ್ನು ಬೀದರ್ ಉತ್ಸವ ಎಂದು ಆಚರಿಸಲಾಗುತ್ತದೆ ಇದನ್ನು ಪ್ರತೀ ವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳುಗಳಲ್ಲಿ ನಡೆಸಲಾಗುತ್ತದೆ. ಈ ಹಬ್ಬವು ಇಲ್ಲಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಈ ಜಾತ್ರೆಯ ಸಮಯದಲ್ಲಿ ಗಾಳಿಪಟ ಹಾರಾಟ ಸ್ಪರ್ಧೆ, ಮಕ್ಕಳ ಚಲನಚಿತ್ರೋತ್ಸವ, ಇಲ್ಲಿಯ ಹೆಸರಾಂತ ಕವಿಗಳು ಮತ್ತು

ನಡೆಸಲಾಗುವ ಮುಶೈರಾಗಳು ಅಥವಾ ಶೇರ್ ಗಳು ಬೀದಿ ನಾಟಕಗಳು ಇತ್ಯಾದಿ ಚಟುವಟಿಕೆಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ.ಬೀದರ್ ಕೋಟೆ ಮತ್ತು ರಂಗಮಂದಿರದಂತಹ ಹಲವಾರು ಸ್ಥಳಗಳಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತವೆ.
ಈ ನಗರಕ್ಕೆ ಹತ್ತಿರವಿರುವ ಹುಮ್ನಾಬಾದ್ ನಲ್ಲಿ ಒಂದು ವಾರಗಳ ಕಾಲ ನಡೆಯುವ ವೀರಭದ್ರೇಶ್ವರ ಜಾತ್ರೆ ಅಥವ ರಥೋತ್ಸವವು ಇಲ್ಲಿಯ ಒಂದು ಪ್ರಸಿದ್ದ ಜಾತ್ರೆಯಾಗಿದೆ. ಇದು ಪ್ರತಿ ವರ್ಷ ಫೆಬ್ರವರಿಯಲ್ಲಿ ನಡೆಯುತ್ತದೆ ಮತ್ತು ಬೀದರ್‌ನ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ.


Click it and Unblock the Notifications
















