Search
  • Follow NativePlanet
Share
» »ರಾಮೇಶ್ವರಂನಲ್ಲಿ ದೇವಾಲಯಗಳೇ ಅಲ್ಲದೇ ಪ್ರವಾಸಿ ತಾಣಗಳು ಕೂಡ ಇವೆ....

ರಾಮೇಶ್ವರಂನಲ್ಲಿ ದೇವಾಲಯಗಳೇ ಅಲ್ಲದೇ ಪ್ರವಾಸಿ ತಾಣಗಳು ಕೂಡ ಇವೆ....

ರಾಮೇಶ್ವರ ಎಂದ ತಕ್ಷಣ ಪ್ರತಿಯೊಬ್ಬರಿಗೂ ಮೊದಲು ನೆನಪು ಬರುವುದೇ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸ್ಥಳವೆಂದು. ಮುಖ್ಯವಾಗಿ ಇಲ್ಲಿನ ಸಮುದ್ರ ಸ್ನಾನವನ್ನು ಅತ್ಯಂತ ಪವಿತ್ರವಾದ ಕಾರ್ಯ ಎಂದು ಭಾವಿಸುತ್ತಾರೆ. ಅದೇ ವಿಧವಾಗಿ ರಾಮೇಶ್ವರದ ಸುತ್ತಮುತ

ರಾಮೇಶ್ವರ ಎಂದ ತಕ್ಷಣ ಪ್ರತಿಯೊಬ್ಬರಿಗೂ ಮೊದಲು ನೆನಪು ಬರುವುದೇ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸ್ಥಳವೆಂದು. ಮುಖ್ಯವಾಗಿ ಇಲ್ಲಿನ ಸಮುದ್ರ ಸ್ನಾನವನ್ನು ಅತ್ಯಂತ ಪವಿತ್ರವಾದ ಕಾರ್ಯ ಎಂದು ಭಾವಿಸುತ್ತಾರೆ. ಅದೇ ವಿಧವಾಗಿ ರಾಮೇಶ್ವರದ ಸುತ್ತಮುತ್ತಲದಲ್ಲಿ ಅನೇಕ ವಿಶಿಷ್ಟವಾದ ದೇವಾಲಯಗಳಿವೆ. ಅವುಗಳಲ್ಲಿ ಕೋದಂಡರಾಮ ಸ್ವಾಮಿ ದೇವಾಲಯ, ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಇನ್ನೂ ಹಲವಾರು. ರಾಮೇಶ್ವರಂ ಕೇವಲ ಧಾರ್ಮಿಕ ಸ್ಥಳವೇ ಅಲ್ಲದೆ, ಪ್ರಮುಖ ಪ್ರವಾಸಿ ತಾಣವೂ ಹೌದು. ರಾಮೇಶ್ವರದಲ್ಲಿ ದೇವಾಲಯಗಳೇ ಅಲ್ಲದೆ ಅನೇಕ ರೋಮಾಂಚನಕಾರಿಯಾದ ಸ್ಥಳಗಳು ಕೂಡ ಇವೆ.

ಲೇಖನದ ಮೂಲಕ ರಾಮೇಶ್ವರದಲ್ಲಿನ ಅನೇಕ ಪ್ರಸಿದ್ಧ ತಾಣಗಳ ಬಗ್ಗೆ ತಿಳಿದುಕೊಳ್ಳೋಣ.

1. ರಾಮನಾಥಸ್ವಾಮಿ ದೇವಾಲಯ

1. ರಾಮನಾಥಸ್ವಾಮಿ ದೇವಾಲಯ

PC:YOUTUBE

ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ದೇವಾಲಯಗಳಲ್ಲಿ ರಾಮನಾಥಸ್ವಾಮಿ ದೇವಾಲಯವೂ ಒಂದು. ಪೂರ್ವದಲ್ಲಿ ಇಲ್ಲಿ ಸುಮಾರು 112 ಸರೋವರಗಳು ಇದ್ದವು ಎಂದು ಹೇಳುತ್ತಾರೆ. ಆದರೆ ಪ್ರಸ್ತುತ ಇಲ್ಲಿ 12 ಸರೋವರಗಳು ಮಾತ್ರವೇ ಇದೆ. ವಿಶಾಲವಾದ ದೇವಾಲಯದ ಪ್ರಾಂಗಣದಲ್ಲಿ ರಾಮನಾಥಸ್ವಾಮಿ ದೇವಾಲಯ 2 ಸ್ಥಾನದಲ್ಲಿದೆ.

2. ಕೋದಂಡ ಸ್ವಾಮಿ ದೇವಾಲಯ

2. ಕೋದಂಡ ಸ್ವಾಮಿ ದೇವಾಲಯ

PC:YOUTUBE

ಇಲ್ಲಿರುವ ಕೋದಂಡ ಸ್ವಾಮಿ ದೇವಾಲಯವು ರಾಮಾಯಣದ ಕಾಲದಿಂದಲೂ ಇದೆ ಎಂದು ನಂಬಲಾಗಿದೆ. ಮುಖ್ಯವಾಗಿ ಈ ದೇವಾಲಯವನ್ನು ವಿಭೀಷಣನು ನಿರ್ಮಿಸಿದನು ಎಂದು ಹೇಳುತ್ತಾರೆ. ಇಲ್ಲಿ ದೇವಾಲಯಕ್ಕೆ ಅಂಟಿಕೊಂಡಿರುವ ಸಮುದ್ರವು ಮನಸ್ಸಿಗೆ ಆಹ್ಲಾದಕರವಾದ ಅನುಭವವನ್ನು ನೀಡುತ್ತದೆ.

3. ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ

3. ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ

PC:YOUTUBE

ರಾಮೇಶ್ವರಂ ನಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯವಿದೆ. ಇಲ್ಲಿನ ವಿಗ್ರಹವನ್ನು ಸಾಲಗ್ರಾಮ ಶಿಲೆಯಿಂದ ಮಾಡಲ್ಪಟ್ಟಿರುವುದು ಎನ್ನಲಾಗಿದೆ. ಈ ಸಾಲಗ್ರಾಮ ಶಿಲೆಯು ಹಿಂದೂಧರ್ಮದ ಪ್ರಕಾರ ಅತ್ಯಂತ ಪವಿತ್ರವಾದುದು.

4. ಅಗ್ನಿ ತೀರ್ಥ

4. ಅಗ್ನಿ ತೀರ್ಥ

PC:YOUTUBE

ಭಾರತ ದೇಶದಲ್ಲಿನ ಪವಿತ್ರ ತೀರ್ಥಗಳಲ್ಲಿ ಅಗ್ನಿ ತೀರ್ಥ ಒಂದು. ಈ ತೀರ್ಥದಲ್ಲಿ ಸ್ನಾನವನ್ನು ಆಚರಿಸುವವರ ಪಂಚ ಪಾಪಗಳು ಪರಿಹಾರವಾಗುತ್ತದೆ ಎಂದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ. ಇಲ್ಲಿ ಶ್ರಾದ್ಧ ಕಾರ್ಯಗಳನ್ನು ಕೂಡ ಮಾಡುತ್ತಾರೆ. ಈ ಪವಿತ್ರವಾದ ತೀರ್ಥದಲ್ಲಿ ಸ್ನಾನ ಮಾಡಿದ ನಂತರವೇ ರಾಮೇಶ್ವರದಲ್ಲಿನ ಇತರ ತೀರ್ಥಗಳಲ್ಲಿ ಸ್ನಾನವನ್ನು ಆಚರಿಸಬೇಕು ಎಂದು ಹಿಂದೂಗಳ ನಂಬಿಕೆಯಾಗಿದೆ.

 5. ಆರ್ಯ ಮಾನ್ ಬೀಚ್

5. ಆರ್ಯ ಮಾನ್ ಬೀಚ್

PC:YOUTUBE

ರಾಮೇಶ್ವರದಿಂದ ಕೇವಲ 27 ಕಿಲೋಮೀಟರ್ ದೂರದಲ್ಲಿರುವ ಅದ್ಭುತವಾದ ಈ ಆರ್ಯ ಮಾನ್ ಬೀಚ್ ಅತ್ಯಂತ ಸ್ವಚ್ಛವಾದುದು. ಇಲ್ಲಿ ಈಜಾಡಲು ಅತ್ಯಂತ ಅನುಕೂಲಕರವಾಗಿದೆ. ಹಾಗಾಗಿ ರಾಮೇಶ್ವರಕ್ಕೆ ತೆರಳುವ ಅನೇಕ ಮಂದಿ ಭಕ್ತರು ಹಾಗೂ ಪ್ರವಾಸಿಗರು ತಪ್ಪದೇ ಈ ಆರ್ಯ ಮಾನ್ ಬೀಚ್ ಗೆ ತೆರಳಿ ತಮ್ಮ ಸುಂದರವಾದ ಸಮಯವನ್ನು ಕಳೆಯುತ್ತಾರೆ.

6. ಧನುಷ್ಕೋಡಿ

6. ಧನುಷ್ಕೋಡಿ

PC:YOUTUBE

ರಾಮೇಶ್ವರಂಗೆ ತೆರಳುವ ಎಲ್ಲಾ ಪ್ರವಾಸಿಗರು ತಪ್ಪದೆ ಧನುಷ್ಕೋಡಿಗೆ ಭೇಟಿ ನೀಡುತ್ತಾರೆ. ಏಕೆಂದರೆ ಒಂದು ಭಾಗದಲ್ಲಿ ಅರೇಬಿಯಾ ಸಮುದ್ರವಿದ್ದರೆ ಮತ್ತೊಂದು ಭಾಗದಲ್ಲಿ ಬಂಗಾಳಕೊಲ್ಲಿ ಇದೆ. ಎರಡು ಸಮುದ್ರಗಳು ಒಂದೇ ಸ್ಥಳದಲ್ಲಿ ಸೇರುತ್ತದೆ. ಈ ಪ್ರದೇಶವು ಅತ್ಯಂತ ಸುಂದರವಾಗಿರುತ್ತದೆ.

 7. ರಾಮಸೇತು

7. ರಾಮಸೇತು

PC:YOUTUBE

ರಾಮಾಯಣದ ಕಾಲದಲ್ಲಿ ಶ್ರೀರಾಮನು ಲಂಕಾಕ್ಕೆ ತೆರಳಲು ವಾನರ ಸೈನ್ಯದ ಸಹಾಯದ ಮೂಲಕ ಈ ಸೇತುವೆಯನ್ನು ನಿರ್ಮಾಣ ಮಾಡಿದನು ಎಂದು ಪುರಾಣಗಳು ತಿಳಿಸುತ್ತವೆ. ಈ ಸೇತುವೆಯ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಕೆಲವರು ಈ ಸೇತುವೆ ನಿಸರ್ಗದತ್ತವಾಗಿರುವುದು ಎಂದರೆ, ಇನ್ನು ಕೆಲವರು ವಾನರ ಸೈನ್ಯದ ಮೂಲಕ ಶ್ರೀರಾಮನ ನೇತೃತ್ವದಲ್ಲಿ ನಿರ್ಮಾಣವಾದ ಸೇತುವೆ ಎಂದು ಹೇಳುತ್ತಾರೆ. ರಾಮೇಶ್ವರಂಗೆ ತೆರಳಿದವರು ತಪ್ಪದೇ ಈ ರಾಮಸೇತುವಿಗೆ ಭೇಟಿ ನೀಡುತ್ತಾರೆ.

8. ಪಕ್ಷಿ ಸಂರಕ್ಷಣಾ ಕೇಂದ್ರ

8. ಪಕ್ಷಿ ಸಂರಕ್ಷಣಾ ಕೇಂದ್ರ

PC:YOUTUBE

ಈ ಪಕ್ಷಿ ಸಂರಕ್ಷಣಾ ಕೇಂದ್ರವು ಪಕ್ಷಿ ಪ್ರೇಮಿಗಳಿಗೆ ಅತ್ಯಂತ ಅದ್ಭುತವಾದ ತಾಣ. ರಾಮೇಶ್ವರದಲ್ಲಿ ಕೇವಲ ಧಾರ್ಮಿಕ ಸ್ಥಳಗಳು ಅಲ್ಲದೆ ಪಕ್ಷಿಧಾಮಗಳು ಕೂಡ ಇವೆ. ನಿಸರ್ಗ ಧಾಮದಲ್ಲಿ ಕೇವಲ ಭಾರತದ ವಿವಿಧ ಪಕ್ಷಿಗಳಿಗೆ ಅಲ್ಲದೆ ಶ್ರೀಲಂಕಾದಿಂದ ಬರುವ ವಲಸೆ ಪಕ್ಷಿಗಳು ಕೂಡ ಇವೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+