Search
  • Follow NativePlanet
Share
» »ಭಾರತದ ಈ 10 ಸುಂದರ ಸ್ಥಳಗಳು ಕೆಲವೇ ವರ್ಷಗಳಲ್ಲಿ ಕಣ್ಮರೆಯಾದರೂ ಆಶ್ಚರ್ಯವಿಲ್ಲ!?

ಭಾರತದ ಈ 10 ಸುಂದರ ಸ್ಥಳಗಳು ಕೆಲವೇ ವರ್ಷಗಳಲ್ಲಿ ಕಣ್ಮರೆಯಾದರೂ ಆಶ್ಚರ್ಯವಿಲ್ಲ!?

ಅಮೆಜಾನ್ ಕಾಡಿನಲ್ಲಿ ಆಗಾಗ್ಗೆ ಭಾರಿ ಕಾಳ್ಗಿಚ್ಚು ಸಂಭವಿಸಿ ಅಪಾರ ಸಸ್ಯ ಹಾಗೂ ಪ್ರಾಣಿ ಸಂಪತ್ತು ನಾಶವಾಗಿವೆ. ಗ್ರೀನ್‌ಲ್ಯಾಂಡ್‌ನ ಹಿಮನದಿಗಳು ಕರಗುತ್ತಿವೆ, ಮರುಭೂಮಿಗಳೂ ಪ್ರವಾಹಕ್ಕೆ ಒಳಗಾಗುತ್ತಿವೆ. ಚಂಡಮಾರುತಗಳು, ಭೂಕುಸಿತಗಳು ಮತ್ತು ಕ್ಷಾಮಗಳು ಹೆಚ್ಚಾಗುತ್ತಿವೆ. ಇದು ಯಾವುದೇ ಹಾಲಿವುಡ್ ಚಿತ್ರದ ಕಥೆಯಲ್ಲ...ಪ್ರತಿದಿನ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಮುಖ್ಯಾಂಶಗಳು. ನೀವು ಪರಿಸರ ಪ್ರೇಮಿಗಳಾಗಿದ್ದರೆ ಇಂತಹ ದುರಂತದ ಕಥೆಗಳನ್ನು ನಿಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ನೀವು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿರಬಹುದು. ಆದರೆ ಇಂದು ನಾವು ಈ ಲೇಖನದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಕೆಲವು ಸುಂದರವಾದ ತಾಣಗಳು ಅಪಾಯದಲ್ಲಿದ್ದು, ಅವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ...

ಬೆಂಗಳೂರಿನ ಲೇಕ್‌ಗಳು

ಸುದ್ದಿ ಮೂಲಗಳ ಪ್ರಕಾರ ಕಳೆದ ಮೂವತ್ತು ವರ್ಷಗಳಲ್ಲಿ ಬೆಂಗಳೂರು 90 ಕೆರೆಗಳನ್ನು ಕಳೆದುಕೊಂಡಿರುವುದು ಸತ್ಯ. ರಸ್ತೆಗಳು ಮತ್ತು ಕಟ್ಟಡಗಳಿಗೆ ದಾರಿ ಮಾಡಿಕೊಡಲು ಇಲ್ಲಿರುವ ಸಣ್ಣ ಉದ್ಯಾನಗಳನ್ನು ತೆಗೆದುಹಾಕಲಾಯಿತು. ಮೆಜೆಸ್ಟಿಕ್ ಬಸ್ ನಿಲ್ದಾಣದ ತರಹ ಅನೇಕ ಕಡೆ ಕೆರೆಗಳನ್ನು ತುಂಬಿಸಿ ನಿಲ್ದಾಣ, ಕಟ್ಟಡಗಳನ್ನು, ಬಡವಾಣೆಗಳನ್ನು ರಚಿಸಲಾಗಿದೆ. ಇನ್ನು ಉಳಿದ ಕೆರೆಗಳು ಮತ್ತು ಕೊಳಗಳು ಮಾಲಿನ್ಯವನ್ನು ಎದುರಿಸುತ್ತಿವೆ ಮತ್ತು ಕೆಲವೇ ವರ್ಷಗಳಲ್ಲಿ ನಿರ್ಮಾಣ ಯೋಜನೆಗಳಿಗೆ ಹಸ್ತಾಂತರಿಸಲಾಗುವುದು.

ramsetu1

ರಾಮ ಸೇತು, ತಮಿಳುನಾಡು

ರಾಮಸೇತು ಭಾರತಕ್ಕೆ ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದೆ ಮತ್ತು ರಾಮಾಯಣದ ಜೀವಂತ ಪುರಾವೆಯಾಗಿದೆ. ಆದರೆ ಹೆಚ್ಚುತ್ತಿರುವ ಸಮುದ್ರ ಮಟ್ಟದಿಂದಾಗಿ ಭಾರತವನ್ನು ಶ್ರೀಲಂಕಾಕ್ಕೆ ಸಂಪರ್ಕಿಸುವ ಈ ಸೇತುವೆಯು ದ್ವಾರಕಾ ನಗರದಂತೆ ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಬಹುದು.

ಮಜುಲಿ ದ್ವೀಪ, ಅಸ್ಸಾಂ

ಮಜುಲಿ ದ್ವೀಪವು ವಿಶ್ವದ ಅತಿದೊಡ್ಡ ನದಿ ದ್ವೀಪವೆಂದು ಘೋಷಿಸಲ್ಪಟ್ಟಿದೆ, 2019 ರ ವೇಳೆಗೆ ತನ್ನ ಅರ್ಧದಷ್ಟು ಭೂಮಿಯನ್ನು ಇದು ಕಳೆದುಕೊಂಡಿದೆ. ಪ್ರತಿ ವರ್ಷ ಬ್ರಹ್ಮಪುತ್ರ ನದಿಯು ದ್ವೀಪದ ಕೆಲವು ಭಾಗವನ್ನು ಕೊಚ್ಚಿಕೊಂಡು ಹೋಗುತ್ತದೆ ಮತ್ತು ಜನರು ದ್ವೀಪದ ಮಧ್ಯದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ.

valleyofflowers2

ಹೂಗಳ ಕಣಿವೆ, ಉತ್ತರಾಖಂಡ

ಈ ಹಿಂದೆ ತಲುಪಲು ಕಷ್ಟವಾಗಿದ್ದ ಹೂಗಳ ಕಣಿವೆಗೆ ಹೋಗುವುದು ಈಗ ಸ್ವಲ್ಪ ಸುಲಭವಾಗಿದೆ. ಆದರೆ ಜನರ ಓಡಾಟದಿಂದ ಇಲ್ಲಿ ಪರಿಸರದ ಮೇಲೆ ಒತ್ತಡವೂ ಹೆಚ್ಚಿದೆ. ಈ ರಾಷ್ಟ್ರೀಯ ಉದ್ಯಾನವನವು ಮಾಲಿನ್ಯದಿಂದ ರಕ್ಷಿಸಲ್ಪಟ್ಟಿದೆಯಾದರೂ, ಮನುಷ್ಯರ ಉಪಸ್ಥಿತಿಯು ಪರಿಸರದಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಇಲ್ಲಿ ಬ್ರಹ್ಮಕಮಲದ ಜೊತೆಗೆ ಹಲವು ಹೂವುಗಳು ಕಡಿಮೆ ಸಂಖ್ಯೆಯಲ್ಲಿ ಅರಳುತ್ತಿದ್ದು, ಭವಿಷ್ಯದಲ್ಲಿ ಯಾವುದೇ ಹೂವುಗಳು ಅರಳದಿರುವ ಸಾಧ್ಯತೆಯೂ ಇದೆ.
ಲಕ್ಷದ್ವೀಪದ ಹವಳದ ಬಂಡೆಗಳು

ಸ್ಥಳೀಯರ ಹವಳದ ಬಂಡೆಗಳ ಕಳ್ಳಸಾಗಣೆಯಿಂದ ಲಕ್ಷದ್ವೀಪದ ಹವಳದ ದಿಬ್ಬಗಳಿಗೂ ಹಾನಿಯಾಗಿದೆ. ಬಂಗಾರಮ್ ದ್ವೀಪದ ಸುತ್ತಮುತ್ತಲಿನ ಶೇಕಡ 90 ರಷ್ಟು ಹವಳಗಳು ನಾಶವಾಗಿವೆ. ಎಲ್ಲಾ ಹವಳದ ಬಂಡೆಗಳು ಕೆಲವೇ ವರ್ಷಗಳಲ್ಲಿ ನಾಶವಾದರೂ ಆಶ್ಚರ್ಯವಿಲ್ಲ. ಹವಳದ ಬಂಡೆಗಳಿಗೆ ಉಂಟಾದ ಹಾನಿಯ ಜೊತೆಗೆ, ಹೆಚ್ಚುತ್ತಿರುವ ಸಮುದ್ರ ಮಟ್ಟವು ಪರ್ಲಿ 1 ಎಂಬ ದ್ವೀಪವನ್ನು ಆವರಿಸಿದೆ.

sundarbans

ಸುಂದರಬನ್ಸ್, ಪಶ್ಚಿಮ ಬಂಗಾಳ

40 ಪ್ರತಿಶತದಷ್ಟು ಸುಂದರಬನ್ ಭಾರತದ ಭಾಗವಾಗಿದೆ. ಉಳಿದಂತೆ ಬಾಂಗ್ಲಾದೇಶದ ಭಾಗವಾಗಿದೆ. ಭಾರತದ ಭಾಗದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳು ಮತ್ತು ಹೈಡಲ್ ಯೋಜನೆಗಳು ಸುಂದರಬನ್ಸ್‌ನ ನೀರನ್ನು ಉಪ್ಪಾಗಿಸಿದೆ. ಮೀನುಗಾರರ ಚಟುವಟಿಕೆಯಿಂದಾಗಿ ಸುಂದರಬನದಲ್ಲಿ ಮರಗಳು ಕೂಡ ಹಾನಿಗೊಳಗಾಗಿದ್ದು, ಇದರಿಂದ ದ್ವೀಪಗಳಿಗೆ ನೀರು ಬರಲಾರಂಭಿಸಿದೆ. ಘೋಡಮಾರ ದ್ವೀಪ ಮುಳುಗುವ ಹಂತದಲ್ಲಿದೆ.

ವುಲರ್ ಸರೋವರ, ಕಾಶ್ಮೀರ

ಭಾರತದ ಅತಿದೊಡ್ಡ ಸಿಹಿನೀರಿನ ಸರೋವರವು ಜನರ ಪ್ರಯಾಣದ ಪಟ್ಟಿಗಳಲ್ಲಿ ಅಗ್ರಸ್ಥಾನದಲ್ಲಿಲ್ಲದಿರಬಹುದು. ಆದರೆ ಇದು ಭಾರತದ ಸುಂದರವಾದ ಸ್ಥಳಗಳಲ್ಲಿ ಒಂದಾಗಿದ್ದು, ಅದರ ದಡದಲ್ಲಿ ಬೆಳೆದಿರುವ ಮರಗಳು ಇದಕ್ಕೆ ಸಮಸ್ಯೆಯಾಗುತ್ತಿವೆ. ಈ ಮರಗಳು ಸರೋವರದ ದಡದಲ್ಲಿ ಸಂಗ್ರಹವಾಗುತ್ತಿರುವ ಮಣ್ಣಿನ ಹರಿವನ್ನು ನಿಲ್ಲಿಸುತ್ತವೆ, ಇದು ವುಲಾರ್ ಸರೋವರದ ಗಾತ್ರವನ್ನು ಕಡಿಮೆ ಮಾಡುತ್ತದೆ. ಈ ಕೆರೆಯನ್ನು ಸಂರಕ್ಷಿಸಲು ಸರ್ಕಾರ ಇಲ್ಲಿ ಮರಗಳನ್ನು ಕಡಿಯಲು ಮುಂದಾಗಿದೆ.

lakshdweep

ಸ್ವರ್ಣರೇಖಾ ನದಿ, ಜಾರ್ಖಂಡ್

ನೆರೆಯ ಬಿಹಾರ ರಾಜ್ಯ ಪ್ರವಾಹ ಪೀಡಿತವಾಗಿದ್ದರೆ, ಜಾರ್ಖಂಡ್‌ನ ನದಿಗಳು ಬತ್ತಿ ಹೋಗುತ್ತಿವೆ. ಜಾರ್ಖಂಡ್‌ನ ಏಕೈಕ ದೊಡ್ಡ ನದಿ ಸ್ವರ್ಣರೇಖಾ, ಆದರೆ ಈಗ ಅದನ್ನು ನದಿ ಎಂದು ಕರೆಯುವುದು ಕಷ್ಟಕರವಾಗಿದೆ. ಮಿತಿಮೀರಿದ ಗಣಿಗಾರಿಕೆ ಮತ್ತು ಮಾಲಿನ್ಯದಿಂದಾಗಿ ಈ ನದಿಯು ಕೆಲವೇ ವರ್ಷಗಳಲ್ಲಿ ಅಳಿದುಹೋಗಬಹುದು.

ಆರೆ ಅರಣ್ಯ

ಮುಂಬೈನ ಗದ್ದಲದ ಹೊರತಾಗಿ, ಆರೆ ಅರಣ್ಯವು ನಗರದ ಹೃದಯಭಾಗದಲ್ಲಿ ಹಸಿರಿನಿಂದ ಕೂಡಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಈ ಕಾಡನ್ನು ಸಂಪೂರ್ಣವಾಗಿ ಕಡಿದು ಇಲ್ಲಿ ಮುಂಬೈ ಮೆಟ್ರೋ ಹಾಗೂ ಕಟ್ಟಡಗಳು ನಿರ್ಮಾಣವಾಗಿವೆ.

munroisland

ಮುನ್ರೋ ದ್ವೀಪ

ಈ ಸುಂದರವಾದ ದ್ವೀಪವು ವಿಪತ್ತು ಎದುರಿಸಬೇಕಾಯಿತು. ತೆನ್ಮಲಾ ಅಣೆಕಟ್ಟಿನ ನಿರ್ಮಾಣವು ಇಲ್ಲಿ ಶುದ್ಧ ನೀರಿನ ಹರಿವನ್ನು ನಿಲ್ಲಿಸಿತು. ನಂತರ ಬಂದ ಸುನಾಮಿಯು ಇಲ್ಲಿನ ಮ್ಯಾಂಗ್ರೋವ್ ಕಾಡುಗಳನ್ನು ಹಾನಿಗೊಳಿಸಿತು. ಇದು ದ್ವೀಪವನ್ನು ಸಮುದ್ರದ ಅಲೆಗಳಿಂದ ರಕ್ಷಿಸುತ್ತದೆ. ದ್ವೀಪವು ನಿಧಾನವಾಗಿ ಸಮುದ್ರದಲ್ಲಿ ಮುಳುಗುತ್ತಿದೆ ಮತ್ತು ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗಬಹುದು.

ಲೇಖನವನ್ನು ಓದಿದ ನಂತರ, ಈ ಕೆಲವು ಸ್ಥಳಗಳಿಗೆ ಭೇಟಿ ನೀಡಬೇಕೆಂದು ನಿಮಗೆ ಅನಿಸಬಹುದು. ಆದರೆ ಈ ಸ್ಥಳಗಳಿಗೆ ಭೇಟಿ ನೀಡದಿದ್ದರೆ ಒಳ್ಳೆಯದು.

ಪ್ರವಾಸೋದ್ಯಮ ಮತ್ತು ಮಾನವ ಚಟುವಟಿಕೆಗಳಿಂದಾಗಿ ಈ ಸ್ಥಳಗಳು ಈಗಾಗಲೇ ತೊಂದರೆಯಲ್ಲಿವೆ. ನೀವು ಜಾಗೃತ ಪ್ರವಾಸಿಗರಾಗಿದ್ದರೂ ಸಹ, ಈ ಸ್ಥಳಗಳಲ್ಲಿ ನೈರ್ಮಲ್ಯ ಮತ್ತು ಕಸ ವಿಲೇವಾರಿಯ ಒತ್ತಡವು ಜನರ ಆಗಮನದಿಂದ ಹೆಚ್ಚಾಗುತ್ತದೆ. ಜೊತೆಗೆ ಇಲ್ಲಿನ ಪ್ರಾಣಿಗಳ ವರ್ತನೆಯೂ ಬದಲಾಗುವುದರಿಂದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ, ನಾವು ಈ ಸ್ಥಳಗಳನ್ನು ಕೆಲವು ವರ್ಷಗಳವರೆಗೆ ಸ್ವಾಭಾವಿಕವಾಗಿ ಅಭಿವೃದ್ಧಿಪಡಿಸಲು ಅವಕಾಶ ನೀಡಿದರೆ ಉತ್ತಮ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+