ದೇಶ ಅತಿ ದೊಡ್ಡ ಪ್ರಾರ್ಥನಾ ಮಂದಿರ ಅನ್ನುವ ಹೆಗ್ಗಳಿಕೆಯನ್ನು ಜಾಮಾ ಮಸ್ಜಿದ್ ಹೊಂದಿದೆ. ಅತ್ಯಂತ ಶ್ರೇಷ್ಠ ಮೊಗಲ್ ವಾಸ್ತುಶಿಲ್ಪವನ್ನು ಇದು ಹೊಂದಿದೆ. ಆ ಕಾಲದ ಶೈಲಿಯನ್ನೇ ಇದು ಹೊಂದಿದೆ. ಟೋಂಕ್‌ನ ನವಾಬರಾಗಿದ್ದ ಆಮಿರ್ ಖಾನ್ ಇದನ್ನು 1246ರಲ್ಲಿ ನಿರ್ಮಿಸಲು ಚಾಲನೆ ನೀಡಿದರು. ಈ ಮಸ್ಜಿದ್ ನಿರ್ಮಾಣ ಪೂರ್ಣಗೊಂಡಿದ್ದು 1298ರಲ್ಲಿ. ಆ ಕಾಲದಲ್ಲಿ ಟೋಂಕ್‌ನ್ನು ನವಾಬ್ ವೈಜರುದೊಲ್ಲಾ ಮುನ್ನಡೆಸುತ್ತಿದ್ದರು. ಈ ಕಟ್ಟಡ ಪ್ರಮುಖ ನಾಲ್ಕು ಮಿನಾರ್‌ಗಳನ್ನು ಹೊಂದಿದೆ. ಅತಿ ದೂರದಿಂದಲೇ ಇದು ಗೋಚರಿಸುತ್ತದೆ. ದೂರದಿಂದಲೇ ಈ ಪ್ರದೇಶವನ್ನು ಗುರುತಿಸಬಹುದು. ಚಿನ್ನದ ಪೇಂಟಿಂಗ್ ಹಾಗೂ ಮಿನಾಕರಿಯನ್ನು ಇದರ ಗೋಡೆಗೆ ಲೇಪಿಸಲಾಗಿದೆ. ಇದು ಇಲ್ಲಿನ ಅತ್ಯಂತ ಪ್ರಮುಖ ಆಕರ್ಷಣೆ.


Click it and Unblock the Notifications