ವಲ್ಸದ್ ನಗರದ ಪಶ್ಚಿಮದಲ್ಲಿರುವ ಬೀಚ್ ತಿಥಾಲ್. ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿರುವ ಈ ಬೀಚ್ ಅನ್ನು ಕಪ್ಪು ಮರಳಿನ ಬೀಚ್ ಎಂದು ಕರೆಯಲಾಗುತ್ತದೆ. ದಕ್ಷಿಣ ಗುಜರಾತಿನಲ್ಲಿರುವ ತಿಥಾಲ್ ಬೀಚ್ ಅನ್ನು ವಲ್ಸದ್ ನಗರದಿಂದ ಆಟೋದ ಮೂಲಕ ಅಥವಾ ಬಸ್ಸಿನ ಮೂಲಕ ತಲುಪಬಹುದು. ವಲ್ಸದ್ ಮುಖ್ಯ ನಗರವಾಗಿರುವುದರಿಂದ ಭಾರತದ ಇತರ ಮುಖ್ಯ ನಗರಗಳಿಂದ ರೈಲ್ವೇ ಸಂಪರ್ಕವನ್ನು ಹೊಂದಿದೆ. ರಸ್ತೆ ಮಾರ್ಗವಾಗಿ ವಲ್ಸದ್ ನ ರಾಷ್ಟ್ರೀಯ ಹೆದ್ದಾರಿ 8 ರ ಮೂಲಕ ತಲುಪಬಹುದು.
ತಿಥಲ್ ನಲ್ಲಿ ಸಾಯಿಬಾಬಾ ದೇವಾಲಯ ಮತ್ತು ಸ್ವಾಮೀ ನಾರಾಯಣ ಎರಡು ಮುಖ್ಯ ದೇವಾಲಯಗಳಿವೆ. ಶಾಂತಿಧಾಮ ದೇವಾಲಯ ಕೂಡ ಸಮುದ್ರ ದಡಕ್ಕೆ ಹತ್ತಿರದಲ್ಲಿದೆ. ಇಲ್ಲಿನ ಸ್ವಾಮೀ ನಾರಾಯಣ ದೇವಾಲಯದಲ್ಲಿ ಕೈಯಿಂದ ಕೆತ್ತಿದ ಸುಂದರ ಕಲ್ಲಿನ ಕೆತ್ತನೆಗಳನ್ನು ಕಾಣಬಹದು. ಇಲ್ಲಿನ ಸಾಯಿಬಾಬಾ ದೇವಾಲಯವೂ ಪ್ರಾಖ್ಯಾತಿಯಾಗಿದ್ದು ವಿಶ್ವದಾದ್ಯಂತ ಜನರು ಪ್ರಾರ್ಥನೆಗೆ ಇಲ್ಲಿ ಸೇರುತ್ತಾರೆ.


Click it and Unblock the Notifications