ತಿರುಪತಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಅಪ್ಪಲಾಲಯಗುಂಟ ಬಳಿ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯ ಇದೆ. ದೇವ ವೆಂಕಟೇಶ್ವರನ ವಿಶ್ರಾಂತಿಯ ತಾಣ ಇದು ಎಂದು ನಂಬಲಾಗುತ್ತದೆ. ತಿರುಮಲದಿಂದ ಹಿಂತಿರುಗಿದ ನಂತರ ವೆಂಕಟೇಶ್ವರನು ಇಲ್ಲಿಯೇ ಇದ್ದರು ಎನ್ನಲಾಗುತ್ತದೆ.
ಶ್ರೀ ಪದ್ಮಾವತಿ ಅಮ್ಮನವರೊಂದಿಗೆ ವಿವಾಹವಾದ ನಂತರ ಶ್ರೀ ವೆಂಕಟೇಶ್ವರ ಇಲ್ಲಿಯೇ ಶ್ರೀ ಸಿದ್ದೇಶ್ವರ ಹಾಗೂ ಇತರೆ ಧಾರ್ಮಿಕ ಮುಖಂಡರ ಆಶೀರ್ವಾದ ಪಡೆದ ಎಂಬ ನಂಬಿಕೆಯೂ ಇದೆ. ಇಲ್ಲಿ ಪ್ರತಿ ಶುಕ್ರವಾರ ವಿಶೇಷ ಅಭಿಷೇಕ ನಡೆಯುತ್ತದೆ. ಇದಕ್ಕಾಗಿಯೇ ಈ ದೇವಾಲಯ ಜನಪ್ರಿಯವಾಗಿದೆ. ತಮ್ಮ ಪ್ರಾರ್ಥನೆ ಸಲ್ಲಿಸಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ.
ಶ್ರೀ ಅಂಡಾಳ, ದೇವಿ ಪದ್ಮಾವತಿ ಹಾಗೂ ಆಂಜನೇಯಸ್ವಾಮಿಯ ದೇವಾಲಯವೂ ಇಲ್ಲಿದೆ.


Click it and Unblock the Notifications