ಶ್ರೀ ಗೋವಿಂದರಾಜಸ್ವಾಮಿ ದೇವಾಲಯವು ತಿರುಪತಿಯ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖ ದೇವಾಲಯಗಳ ಸಾಲಿನಲ್ಲಿ ಒಂದು. ವೈಷ್ಣವರ ಕಾಲದ ಸಾಂಪ್ರದಾಯಿಕ ಶೈಲಿಯ ವಾಸ್ತುಶಿಲ್ಪ ಮಾದರಿಯಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ವೈಷ್ಣವ ಸಂತರಾದ ರಾಮಾನುಜರು ಈ ದೇವಾಲಯಕ್ಕೆ 1235 ರಲ್ಲಿ ಅಡಿಗಲ್ಲನ್ನು ಹಾಕಿದ್ದರು ಎಂದು ಹೇಳಲಾಗುತ್ತದೆ.
ಗೋಪುರಂ ಮಾದರಿಯಲ್ಲಿ ಇದು ನಿರ್ಮಾಣಗೊಂಡಿದೆ. ಇಲ್ಲಿನ ಅಡಿಗಲ್ಲು ಹಾಕಿದ ಗೋಡೆಯ ಪಕ್ಕವೇ ಇನ್ನೆರಡು ದೇವಾಲಯಗಳಿವೆ. ದಕ್ಷಿಣ ಭಾಗದ ಕೊನೆಯ ದೇವಾಲಯ ಪಾರ್ಥಸಾರಥಿ ಇದ್ದರೆ ಉತ್ತರದ ಕೊನೆಯಲ್ಲಿ ದೇವ ಗೋವಿಂದರಾಜ ವಿರಾಜಮಾನರಾಗಿದ್ದಾರೆ. ಈ ದೇವಾಲಯ ಇವುಗಳ ಹೊರತಾಗಿಯೂ ಹಲವು ಚಿಕ್ಕಪುಟ್ಟ ದೇವಾಲಯಗಳನ್ನು ತನ್ನೊಳಗೆ ಹೊಂದಿದೆ.
ಇವುಗಳಲ್ಲಿ ಶ್ರೀ ಶ್ರೀ ಮನವಾಳ ಮಾಮುನಿ, ಶ್ರೀ ಚಕ್ರನಾಥೇಶ್ವರ, ಸಲಾಯಿ ನಾಚಿಯಾರ ಅಮ್ಮಾವರಿ, ಶ್ರೀ ಮಾಚುರಕವಿ ಅಲ್ವಾರ, ಶ್ರೀ ವ್ಯಾಸರಾಜ ಆಂಜನೇಯ ಸ್ವಾಮಿ, ಶ್ರೀ ತಿರುಮಲಾಂಗಿ ಅಲ್ವಾರ, ಶ್ರೀ ವೇದಾಂತ ದೇಶಿಕಾರ ಪ್ರಮುಖವಾದವು.


Click it and Unblock the Notifications