ಅವನಾಕ್ಷಮ್ಮ ದೇವಾಲಯವು ತಿರುಪತಿಯಿಂದ 42 ಕಿ.ಮೀ. ದೂರದಲ್ಲಿದೆ. ಪ್ರತಿ ವರ್ಷ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ನವರಾತ್ರಿ ಹಾಗೂ ಬ್ರಹ್ಮೋತ್ಸವಂ ಸಂದರ್ಭದಲ್ಲಿ ಇಲ್ಲಿ ಆಚರಣೆ ಇನ್ನಷ್ಟು ಆಕರ್ಷಕ ಹಾಗೂ ಉತ್ಸಾಹಭರಿತವಾಗಿರುತ್ತದೆ. ಶ್ರೀ ಕಲ್ಯಾಣ ವೆಂಕಟಸ್ವಾಮಿಗೆ ಸಂಬಂಧಿಸಿ ಐದು ದೇವಾಲಯಗಳು ಒಟ್ಟೊಟ್ಟಿಗಿದ್ದು ಅದರಲ್ಲಿ ಇದೂ ಒಂದಾಗಿದೆ. ಇತರೆ ದೇವಾಲಯಗಳೆಂದರೆ ಶ್ರೀ ವೀರಭದ್ರಸ್ವಾಮಿ ದೇವಾಲಯ, ಶ್ರೀ ಪರಾಶರೇಶ್ವರ ಸ್ವಾಮಿ ದೇವಾಲಯ, ಶ್ರೀ ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಶಕ್ತಿ ವಿನಾಯಕ ಸ್ವಾಮಿ ದೇವಾಲಯ.


Click it and Unblock the Notifications