ಅಲಮೇಲು ಮಂಗಮ್ಮ ದೇವಾಲಯವು ಅಲಮೇಲುಂಗಪುರಂನಲ್ಲಿ ಬರುತ್ತದೆ. ಇದು ತಿರುಚನೂರು ಅಂತಲೂ ಕರೆಯಲ್ಪಡುತ್ತದೆ. ಈ ದೇವಾಲಯವು ಅಲಮೇಲು ಮಂಗಮ್ಮ ಅಥವಾ ಪದ್ಮಾವತಿ ದೇವಿಗೆ ಸೇರಿದ್ದಾಗಿದೆ. ಈ ದೇವತೆ ಪುಷ್ಕರಣಿ ಎಂಬ ಕೊಳದಲ್ಲಿ ಜನಿಸಿದಳು ಎಂದು ನಂಬಲಾಗುತ್ತದೆ. ಈ ದೇವಾಲಯ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಧಾರ್ಮಿಕ ನಂಬಿಕೆ ಉಳ್ಳ ಪ್ರವಾಸಿಗರಿಗೆ ಇದು ಪ್ರಶಸ್ತ ತಾಣ.
ಪದ್ಮಾವತಿ ದೇವಾಲಯ ತಿರುಮಲ ಬೆಟ್ಟದಿಂದ ಐದು ಕಿ.ಮಿ. ದೂರದಲ್ಲಿದೆ ಶ್ರೀ ಪದ್ಮಾವತಿ ದೇವಾಲಯ. ದೇವಿ ಪದ್ಮಾವತಿಗೆ ಮೀಸಲಾದ ದೇವಾಲಯ ಇದಾಗಿದೆ. ಈ ದೇವತೆ ವೆಂಕಟೇಶ್ವರ ದೇವರ ಪತ್ನಿ. ತೋಂಡಮನ್ ಚಕ್ರವರ್ತಿ ಈ ದೇವಾಲಯ ಕಟ್ಟಿಸಿದ್ದಾನೆ. ನಂಬಿಕೆ ಪ್ರಕಾರ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಈ ದೇವತೆಗೆ ಗೌರವ ಸಲ್ಲಿಸಿ ತೆರಳಬೇಕು.
ಪದ್ಮಾವತಿ ದೇವಿಯ ಹುಟ್ಟು ಹಾಗೂ ವೆಂಕಟೇಶ್ವರ ದೇವರ ಜತೆಗಿನ ವಿವಾಹ ಕುರಿತ ಮಾಹಿತಿಯನ್ನು ಈ ದೇವಾಲಯ ನೀಡುತ್ತದೆ. ದೇವಿ ಪದ್ಮಾವತಿ ತೊಂಡಮಂಡಲಂನ ರಾಜಾ ಆಕಾಶನ ಪುತ್ರಿ. ರಾಜ ನಡೆಸಿದ ಯಾಗವೊಂದರ ಸಂದರ್ಭದಲ್ಲಿ ಸಿಕ್ಕ ಕಮಲದ ಹೂವಿನಿಂದ ಈಕೆಯ ಜನ್ಮವಾಗಿದ್ದು, ಇದರಿಂದ ಪದ್ಮಾವತಿ ಎಂಬ ಹೆಸರು ಬಂತೆಂಬುದಾಗಿ ಐತಿಹ್ಯಗಳು ಹೇಳುತ್ತದೆ. ಈಕೆಯು ಕೇವಲ ಈ ಹೆಸರನ್ನು ಮಾತ್ರವಲ್ಲದೆ ಅಲಮೇಲು ಮಂಗ ಅಂತಲೂ ಕರೆಸಿಕೊಳ್ಳುತ್ತಾಳೆ. ಪ್ರೀತಿಯಿಂದ ಈ ರೀತಿ ಕರೆಯಲಾಗುತ್ತದೆ. ಈಕೆ ಬೆಳೆದು ದೊಡ್ಡವಳಾಗುತ್ತಿದ್ದಂತೆ ಸ್ವಾಮಿ ವೆಂಕಟೇಶ್ವರ ಖುದ್ದು ಬಂದು ಅದ್ಧೂರಿಯಾಗಿ ವಿವಾಹವಾಗುತ್ತಾನೆ ಎಂದು ಪುರಾಣದಲ್ಲಿ ಹೇಳಲಾಗಿದೆ.