ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಅರಂತಗಿರಿ ಜೈನ ಮಠ ಇಡೀ ಭಾರತದ ಜೈನ ಸಮುದಾಯದವರ ಧಾರ್ಮಿಕ ಶ್ರದ್ದಾ ಕೇಂದ್ರ. ಸಮುದಾಯ ಕೇಂದ್ರಿತ ಸೇವೆಗಳನ್ನು ಒದಗಿಸುವ ಗುರಿಯನ್ನಿಟ್ಟುಕೊಂಡು 1998ರಲ್ಲಿ ಅರಂತಗಿರಿ ಜೈನ ಮಠವನ್ನು ಸ್ಥಾಪಿಸಲಾಯಿತು.
ಮಠದ ಒಳಭಾಗದಲ್ಲಿ ಹಲವಾರು ಸಂಕೀರ್ಣಗಳಿವೆ. ನಾಲ್ಕು ಜೈನ ದೇವಸ್ಥಾನಗಳು, ಮೂರು ಜೈನ ಗುಹೆಗಳು ಮತ್ತು 16 ಮೀಟರ್ ಎತ್ತರದ ನೇಮಿನಾಥನ ರಚೆನಗಳಿವೆ. ತಮಿಳುನಾಡಿನಲ್ಲಿಯೇ ಇದು ಎತ್ತರದ ರಚನೆಯಾಗಿದ್ದು 12 ನೇ ಶತಮಾನಕ್ಕೆ ಸೇರಿದ್ದು ಎಂಬ ನಂಬಿಕೆಯಿದೆ. ನೇಮಿನಾಥ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ದ ಸಿನಿಮಾವೊಂದನ್ನು ಮಾಡಲಾಗಿದೆ.
ಭಟ್ಟಾರಕ ಧವಳಕೀರ್ತಿಯವರು ಮಠದ ಮುಖ್ಯಸ್ಥರು. ಬಡವರು ಮತ್ತು ಅವಶ್ಯಕತೆಯುಳ್ಳವರಿಗೆ ಇವರು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದರು. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಶಾಲೆಗಳನ್ನು ತೆರೆದು ಅವರಿಗೆ ಬದುಕಲು ಕಲಿಸಲಾಯಿತು.


Click it and Unblock the Notifications