Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಆಕರ್ಷಣೆಗಳು » ನೆಯ್ಯರ್ ಅಣೆಕಟ್ಟು

ನೆಯ್ಯರ್ ಅಣೆಕಟ್ಟು, ತಿರುವನಂತಪುರಂ

5

ನೆಯ್ಯರ್ ಅಣೆಕಟ್ಟನ್ನು 1958  ರಲ್ಲಿ ಕಟ್ಟಲಾಯಿತು. ಈ ಅಣೆಕಟ್ಟನ್ನು ನೆಯ್ಯರ್, ಕಲ್ಲಾರ್ ಮತ್ತು ಮುಲ್ಯಾರ್ ಈ ಮೂರು ನದಿಗಳು ಸೇರುವಲ್ಲಿ ಕಟ್ಟಲಾಗಿದೆ. ಈ ಸ್ಥಳ ಪಿಕ್ ನಿಕ್ ಗೆ ಮತ್ತು ಕುಟುಂಬ ವಿಹಾರಕ್ಕೆ ಹೋಗಲು ಅತ್ಯುತ್ತಮವಾದ ಸ್ಥಳವಾಗಿದೆ. ಈ ಪ್ರದೇಶದ ಸಮೀಪದ ಮನೆಗಳಲ್ಲಿ ವೈಶಿಷ್ಠ್ಯ ಜಾತಿಯ  ಹೂಗಳು ಮತ್ತು ಪ್ರಾಣಿಗಳ ಸಂಕುಲಗಳನ್ನು ಕಾಣಬಹುದು. ಅಲ್ಲದೇ ಇಲ್ಲಿ ವನ್ಯ ಜೀವಿಗಳ ರಕ್ಷಣೆಗಾಗಿ ವನ್ಯ ಜೀವಿ ಅಭಯಾರಣ್ಯವನ್ನು ಸ್ಥಾಪಿಸಲಾಗಿದೆ. ಇಲ್ಲಿ  ಸಫಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು ಇದರಲ್ಲಿ  ನೀವು ಹೋದರೆ ಜಿಂಕೆ, ಸಿಂಹ ಈ ರೀತಿಯ ಕಾಡುಪ್ರಾಣಿಗಳನ್ನು ನೋಡಬಹುದು. ಅಲ್ಲದೇ ಇಲ್ಲಿ ಮೊಸಳೆಗಳಿಗಾಗಿ ನೀರಿರುವ ಸರೋವರದಂತಹ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಲ್ಲಿ ದೊಡ್ಡ-ದೊಡ್ಡ ಮೊಸಳೆಗಳು ಬಂಡೆ ಕಲ್ಲಿನ ಮೇಲೆ ಬಿಸಿಲಿಗೆ ಮೈಯೊಡ್ಡಿ ಮಲಗಿರುವುದನ್ನು ಕಾಣಬಹುದು. ಅಲ್ಲದೇ ಸರಿಸೃಪಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು. ಈ ಅಭಯಾರಣ್ಯಕ್ಕೆ ಹೋಗಲು ಪ್ರವೇಶ ಶುಲ್ಕವನ್ನು  ಪಾವತಿಸಬೇಕು. ದಿನವಿಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಬಹುದು. ಇಲ್ಲಿಂದ 7 ಕಿ. ಮೀ ದೂರಲ್ಲಿ ಆನೆಗಳಿಗಾಗಿಯೇ ಮೀಸಲಿಟ್ಟ  ತಂಗುದಾಣವಿದೆ. ಇಲ್ಲಿ ಆನೆ ಸವಾರಿ ಕೂಡ ಹೋಗಬಹುದು. ಇಲ್ಲಿಗೆ ನಿಮ್ಮ ಮಕ್ಕಳನ್ನು ಕರೆ ತಂದರೆ ಅವರು ಹಿಂತಿರುಗಿ ಮನೆಗೆ ಹೋಗುವ ಮಾತನ್ನೇ ಆಡುವುದಿಲ್ಲ ! ಅಂತಹ ಸೊಬಗಿನ ತಾಣ ತಿರುವನಂತಪುರಂ ನಲ್ಲಿರುವ ವನ್ಯ ಮೃಗ ಅಭಯಾರಣ್ಯ !

ತಿರುವನಂತಪರನಲ್ಲಿರುವ ಕಂಗೆಡಿಸುವ ಗೆಟ್ ವೇಯನ್ನು ತಲುಪಲು ಹೆಚ್ಚಿನ ಶ್ರಮವೇನಿಲ್ಲ. ತಿರುವನಂತಪುರಂ ನಿಂದ ಕೇವಲ 32 ಕಿ.ಮೀ ದೂರ  ಸಾಗಬೇಕು. ಈ ಪ್ರದೇಶಕ್ಕೆ  ಬಸ್ಸಿನಲ್ಲಿ ಅಥವಾ ನಿಮ್ಮ ಸ್ವಂತ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ಈ ಸ್ಥಳಕ್ಕೆ ಹೋಗಬಹುದು. ಆದರೆ ಈ ಸ್ಥಳದ ಸೌಂದರ್ಯವನ್ನು ಅನುಭವಿಸಲು ನಿಮ್ಮ ಪ್ರವಾಸದ ಒಂದು ದಿನವನ್ನು ಸಂಪೂರ್ಣವಾಗಿ ಇಲ್ಲಿಗೇ ಮೀಸಲಿಡಬೇಕಾಗುತ್ತದೆ. ಅಷ್ಟು ವಿವಿಧ ಪ್ರಾಣಿ ಪಕ್ಷಿಗಳ ನೆಲೆ  ಬೇಕಾಗುತ್ತದೆ. ವನ್ಯ ಜೀವಿ ಅಭಯಾರಣ್ಯ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu