Search
  • Follow NativePlanet
Share
ಮುಖಪುಟ » ಸ್ಥಳಗಳು » ತೆನ್ಮಲ » ಆಕರ್ಷಣೆಗಳು » ಪಲರುವಿ ಜಲಪಾತ

ಪಲರುವಿ ಜಲಪಾತ, ತೆನ್ಮಲ

2

ಪಲರುವಿ ಜಲಪಾತವು ಕೇರಳ - ತಮಿಳುನಾಡು ಗಡಿ ಭಾಗದಲ್ಲಿದೆ. ಇದು ತೇನ್‍ಮಲದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪಲರುವಿ ಎಂದರೆ "ಕ್ಷೀರ ಧಾರೆ" ಎಂದರ್ಥ. ನೊರೆಯುಕ್ಕುವ ನೀರಿನ ಝರಿ, ಬೆಳ್ಳಿಯಂತೆ ಹೊಳೆಯುವ ನೀರಿನ ಕವಲುಗಳು ಮತ್ತು ತಂಪಾದ ವಾತಾವರಣವೆಲ್ಲವು ಕೂಡಿ ಈ ಜಲಪಾತವನ್ನು ನೋಡುಗರ ಕಣ್ಮನವನ್ನು ತಣಿಸುತ್ತವೆ.

ಪಲರುವಿ ಕೊಲ್ಲಂನಿಂದ 75 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ ಮತ್ತು ಪ್ರವಾಸಿಗರು ಈ ಸ್ವರ್ಗದಂತೆ ಕಂಗೊಳಿಸುವ ಜಲಪಾತವನ್ನು ತಲುಪಲು ರಸ್ತೆಯಿಂದ ಕಾಡಿನೊಳಗೆ ನಾಲ್ಕು ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ. ಇದು ಜೈವಿಕ ಪ್ರವಾಸೋದ್ಯಮ ಯೋಜನೆಯ ಪ್ರದೇಶಕ್ಕೆ ಸಮೀಪದಲ್ಲಿದೆ.  ಈ ಜಲಪಾತವು ತೇನ್‍ಮಲಗೆ ಭೇಟಿ ಕೊಡುವವರ ಸಂತಸವನ್ನು ದ್ವಿಗುಣಗೊಳಿಸುತ್ತದೆ. ಈ ಜಲಪಾತದ ಸುತ್ತ- ಮುತ್ತ ನಿತ್ಯ ಹರಿದ್ವರ್ಣ ವನದ ಕಾಡುಗಳಿದ್ದು, ಅವುಗಳು ಪ್ರವಾಸಿಗರನ್ನು ಆಶ್ಚರ್ಯದ ಅಲೆಯಲ್ಲಿ ತೇಲಿಸುತ್ತವೆ.

300 ಅಡಿಯಿಂದ ಧುಮ್ಮಿಕ್ಕುವ ಈ ಜಲಪಾತಕ್ಕೆ ಸ್ಥಳೀಯ ಸಮುದಾಯಗಳು ಆಯೋಜಿಸುವ ಜೈವಿಕ ವಿಹಾರಗಳು ಲಭ್ಯವಿವೆ. ವಿಭಾಗೀಯ ಅರಣ್ಯ ಇಲಾಖೆ ಕಛೇರಿಯಿಂದ ಭೂಪಟಗಳು ಮತ್ತು ಛಾಯಾಚಿತ್ರಗಳಂತಹ ಹಲವಾರು ಪ್ರವಾಸಿ ಸಾಧನಗಳು ನಿಮಗೆ ದೊರೆಯುತ್ತವೆ. ತನ್ನ ಮನಮೋಹಕ ಸೌಂದರ್ಯದಿಂದ ಮತ್ತು ನಿಶ್ಕಲ್ಮಷ ಪರಿಸರದಿಂದಾಗಿ ಈ ಸ್ಥಳವು ಯುವಕರಿಗೆ , ದಂಪತಿಗಳಿಗೆ ಮತ್ತು ಮನೆಮಂದಿಗೆಲ್ಲ ತಮ್ಮ ವಿಹಾರವನ್ನು ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu