ತಂಜಾವೂರಿನಿಂದ 65 ಕಿಲೋಮೀಟರು ದೂರದಲ್ಲಿರುವ ಮನೋರ ಕೋಟೆಯನ್ನು,1814-1815 ರಲ್ಲಿ ಅಂದಿನ ಮರಾಠ ದೊರೆ ಸೆರ್ಜೊಇ-II ಅವರು ನಿರ್ಮಿಸಿದ್ದರು. ಫ್ರಾನ್ಸ್ ಚಕ್ರವರ್ತಿ ನೆಪೋಲಿಯನ್ ಬೊನಪರ್ಟ್ ಅವರ ವಿರುದ್ದ ಬ್ರಿಟೀಷರು ಮುನ್ನಡೆ ಸಾಧಿಸಿದ್ದರ ಸ್ಮರಣಾರ್ಥ ಇದನ್ನು ಕಟ್ಟಲಾಯಿತು. 23 ಮೀಟರ್ ಎತ್ತರ ಹಾಗೂ 8 ಮಹಡಿಗಳಿರುವ ಈ ಕಟ್ಟಡವು ಷಡ್ಭುಜ ಆಕಾರದಲ್ಲಿದೆ. ಮನೋರ ಎಂಬ ಪದವು 'ಮಿನಾರತ್' ಎಂಬ ಪದದಿಂದ ಉದ್ಭವವಾಯಿತು.
2004 ಡಿಸೆಂಬರ್ ನಲ್ಲಿ ಭಾರತ ಸಮುದ್ರದಲ್ಲುಂಟಾದ ಸುನಾಮಿಯಿಂದ ಈ ಕೋಟೆ ಹಾನಿಗೊಳಗಾದರೂ ಅದನ್ನು ನವೀಕರಿಸಲಾಯಿತು. ನವೀಕರಣದ ವೇಳೆ ಮಕ್ಕಳಿಗೆ ಪಾರ್ಕ್, ಪ್ರವಾಸಿ ಶೆಡ್ ಮುಂತಾದವುಗಳನ್ನು ನಿರ್ಮಿಸಲಾಯಿತು.
ಪುರಾವೆಗಳಿಲ್ಲದ ಮೂಲದ ಪ್ರಕಾರ ಈ ಕೋಟೆಯ ಮೂಲಕ ಶ್ರೀಲಂಕಾದ ಜೊತೆಗಿನ ವ್ಯಾಪಾರ ಕುದುರಿಸಲಾಗುತ್ತಿತ್ತು. ರಾಜನು ತನ್ನ ರಹಸ್ಯ ನಿಧಿಯನ್ನು ಹೂತು ಇಟ್ಟಿರುವನೆಂಬ ವದಂತಿಯಿದ್ದು, ಸ್ಥಳೀಯರು ಅದನ್ನು ಹುಡುಕಲು ಕೋಟೆಯನ್ನು ಹಾಳುಗೆಡವಿದರು.


Click it and Unblock the Notifications