ಸಂಗೀತ ಮಹಲ್, ತಂಜಾವೂರಿಗೆ ಭೇಟಿ ನೀಡಿದವರು ನೋಡಲೇ ಬೇಕಾದ ಒಂದು ಸ್ಥಳವಾಗಿದೆ. ಇದು ತಂಜಾವೂರ್ ಅರಮನೆಯ ಮೊದಲನೆ ಮಹಡಿಯಲ್ಲಿದೆ. ನಾಯಕ ಅರಸನಾಗಿದ್ದ ಸೇವಪ್ಪ ನಾಯಕ ನು 17 ನೇ ಶತಮಾನದ ಆದಿಯಲ್ಲಿ ಇದನ್ನು ಕಟ್ಟಿದ್ದನು.
ಚೋಳ ಹಾಗೂ ನಾಯಕ ರಾಜ್ಯಾಢಳಿತ ನಡೆಸುವ ಸಂದರ್ಭದಲ್ಲಿ, ವಿವಿಧ ಸಂಗೀತಗಾರರು ಹಾಗೂ ನೃತ್ಯಗಾರರು ಸಂಗೀತ ಮಹಲ್ ನಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ಇದು ಈಗಲೂ ಅಂದಿನ ಕಾಲದ ವಾಸ್ತುತಜ್ಞ ಹಾಗೂ ಶಿಲ್ಪಿಗಳ ಅದ್ಭುತ ಕೈಚಳಕದ ಸಂಕೇತವಾಗಿ ನಿಂತಿದೆ. ಇಲ್ಲಿನ ಧ್ವನಿವಿಜ್ಞಾನವು ಇಲ್ಲಿಗೆ ಭೇಟಿ ನೀಡಿದ ಎಲ್ಲರನ್ನೂ ಅಂದಿನ ಶಿಲ್ಪಿಗಳ ಜ್ಞಾನದ ಬಗ್ಗೆ ಯೋಚನಾಪರರಾಗುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಅಂದಿನ ದಿನಗಳಲ್ಲಿ, ಆ ಕಾಲದ ಪ್ರಮುಖ ಸಂಗೀತಕಾರರ ನಡುವಿನ ಸ್ಪರ್ಧೆ ಇಲ್ಲಿ ನಡೆಯುತ್ತಿತ್ತು.
ಇಂದು ಸಂಗೀತ ಮಹಲ್ ಕರಕುಶಲ ವಸ್ತುಪ್ರದರ್ಶನ ಶಾಲೆಯಾಗಿದೆ.