ಒದಥಿ ಪಲ್ಲಿ (ಒದಥಿ ಮೋಸ್ಕ್ಯು ಅಂತಲೂ ಕರೆಸಿಕೊಳ್ಳುತ್ತದೆ) ತಲಸ್ಸೆರಿಯ 200 ವರ್ಷ ಹಳೆಯದಾದ ಪ್ರಾರ್ಥನಾ ಕೇಂದ್ರವಾಗಿದೆ. ಮಲಬಾರ್ನ ಎಲ್ಲೆಡೆಯಿಂದ ಭಕ್ತರನ್ನು ಇದು ಸೆಳೆಯುತ್ತದೆ. ಅಲ್ಲದೇ ಜನಪ್ರಿಯ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ.
ಮಸೀದಿಯನ್ನು 19ನೇ ಶತಮಾನಕ್ಕೂ ಮುನ್ನ ಕಟ್ಟಲಾಗಿದೆ. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಮೂಸಕ್ಕಾಕಾ ಎಂಬ ಕಂಟ್ರಾಕ್ಟರ್ ಇದನ್ನು ನಿರ್ಮಿಸಿದ. ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಈ ಮಸೀದಿ ಕಟ್ಟಲಾಗಿದೆ. ತಾಮ್ರದ ಹೊದಿಕೆಯ ಮೇಲ್ಛಾವಣಿ, ಚಿನ್ನದ ಡೂಮ್, ಅತ್ಯಾಕರ್ಷಕ ವಾಸ್ತುಶಿಲ್ಪದ ಆಕರ್ಷಣೆಯನ್ನು ಕಟ್ಟಡ ಹೊಂದಿದೆ. ಮಸೀದಿಯ ಸಪುರಾದ ಉದ್ದನೇ ಸ್ಟ್ರಕ್ಚರ್ ಮೈಲುಗಳಷ್ಟು ದೂರದಿಂದಲೂ ಸ್ಪಷ್ಟವಾಗಿ ಕಾಣುತ್ತದೆ.
ಒದಥಿ ಪಲ್ಲಿ ಇರುವ ಪ್ರದೇಶದಲ್ಲಿಯೇ ಡಚ್ಚರ ಕಾಲದ ಕಬ್ಬಿನ ತೋಟ ಇದೆ. ಮಸೀದಿಯ ಹೆಸರು ಎರಡು ಶಬ್ಧಗಳ ಸೇರ್ಪಡೆಯಿಂದ ಆದುದಾಗಿದೆ. "ಓಡಂ' ಎಂಬ ಡಚ್ ಶಬ್ಧ ಹಾಗೂ ಮಲಯಾಳಂನ "ಪಲ್ಲಿ' ಸೇರಿ ಮಸೀದಿಯ ಹೆಸರು ಸಿದ್ಧವಾಗಿದೆ.