ಫಿಶರ್‌ಪೋಕ್ ಟೆಂಪಲ್ ಕಡಲ ತೀರದ ಜತೆ ಧಾರ್ಮಿಕತೆಯೂ ಈ ದೇವಾಲಯದ ಜತೆ ಬೆರೆತಿದೆ. ಕಣ್ಣೂರಿನಿಂದ ತಲಸ್ಸೆರಿ ಹಾಗೂ ಅಲ್ಲಿಂದ ಮಾಹೆವರೆಗೂ ಇದರ ವ್ಯಾಪ್ತಿ ಇದೆ. ಸ್ಥಳ ವೀಕ್ಷಣೆಗೆ ಈ ತಾಣ ಹೇಳಿ ಮಾಡಿಸಿದಂತಿದೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಡಲ ತೀರ ಹಾಸಿಕೊಂಡಿದೆ. ಈ ಸೌಂದರ್ಯದ ನಡುವೆಯೇ ದೇವಾಲಯವೂ ಸ್ಥಾಪಿಸಲ್ಪಟ್ಟಿದೆ.
ಸ್ಥಳೀಯ ಮೀನುಗಾರರು ಸದಾ ನೀರಿನಲ್ಲಿದ್ದು, ಈ ಸಂದರ್ಭದಲ್ಲಿ ಯಾವುದೇ ಅನಾಹುತ ಎದುರಾಗಬಹುದು. ನೀರಿನೊಂದಿಗೆ ಇವರ ಜೀವದ ಆಟ ನಡೆದಿರುತ್ತದೆ. ಇವರನ್ನು ಕಾಪಾಡಲು ದೇವರನ್ನು ನಂಬಲಾಗಿದೆ. ಪ್ರಾರ್ಥನೆ ಹಾಗೂ ಸಾಧನೆ ಎರಡೂ ಈ ದೇವಾಲಯದೊಂದಿಗೆ ಬೆರೆತಿದೆ. ಮೀನುಗಾರರು ಇದನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗುತ್ತದೆ.
ದೇವಾಲಯದ ಪಕ್ಕದಲ್ಲಿಯೇ ದೇಶದಲ್ಲಿಯೇ ಮೊದಲ ಕ್ರಿಕೆಟ್ ಪಂದ್ಯ ಆಡಿದ ಕ್ರೀಡಾಂಗಣ ಇದೆ. ತಲಸ್ಸೆರಿ ನಗರದಿಂದ ಫಿಶರ್‌ಪೋಕ್ ಟೆಂಪಲ್‌ಗೆ ಸುಲಭವಾಗಿ ತೆರಳಬಹುದು. ಬಸ್ ಅಥವಾ ಆಟೊರಿಕ್ಷಾಗಳು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತವೆ. ಸಂತಸದ ಸಮಯ ಕಳೆಯಲು ಹಾಗೂ ನಿಸರ್ಗ ಸೌಂದರ್ಯ ವೀಕ್ಷಿಸಲು ಇದು ಪ್ರಶಸ್ತ ತಾಣ.


Click it and Unblock the Notifications