ಶಿವಸಾಗರ ನದಿ ತಪೋಲದ ಮುಖ್ಯ ಆಕರ್ಷಣೆ. ಈ ನದಿ ಪಾತ್ರ ಸುಮಾರು 90 ಕಿಲೋಮೀಟರುಗಳವರೆಗೂ ವಿಸ್ತರಿಸಿದ್ದು ಕೊಯ್ನಾ ಆಣೆಕಟ್ಟಿನ ಜಲಾಶಯವಾಗಿದೆ. ನೀವೊಬ್ಬ 'ಜಲಪ್ರಿಯ'ರಾಗಿದ್ದರೆ, ಇಲ್ಲಿ ಖಂಡಿತ ಮಜಾ ಮಾಡುತ್ತೀರಿ! ಈ ಸ್ಥಳದಲ್ಲಿ ಬಹಳಷ್ಟು ಜಲಕ್ರೀಡಾ ಚಟುವಟಿಕೆಗಳಿಗೆ ಅವಕಾಶವಿದೆ. ನೀವಿಲ್ಲಿ ಈಜು, ದೋಣಿ ವಿಹಾರ, ವಾಟರ್ ಸ್ಕೂಟರ್ ಮುಂತಾದ ಸೌಲಭ್ಯಗಳಿಂದ ಯಾವುದಾದರೂ ಆರಿಸಿಕೊಳ್ಳಬಹುದು.
ಇಲ್ಲಿನ ದೋಣಿ ವಿಹಾರ ಕೈಗೆಟುಕುವ ದರದಲ್ಲಿದ್ದು ನೀವು ಸ್ಕೂಟರ್ ಸವಾರಿ, ವೇಗದ ಹಾಯಿ ದೋಣಿ ಅಥವಾ ಮೋಟಾರು ದೋಣಿಯನ್ನು ಆಯ್ದುಕೊಳ್ಳಬಹುದು.


Click it and Unblock the Notifications