ಹಿಂದೂಗಳ ವೀತ್ರಿರುಂಡ ಪೆರುಮಾಳ್ ದೇವಾಲಯ ತಂಜಾವೂರಿನ ವೆಪ್ಪತೂರಿನಲ್ಲಿದೆ. ಇಲ್ಲಿ ವಿಷ್ಣು ದೇವರನ್ನು ಆರಾಧಿಸಲಾಗುತ್ತದೆ. ಈ ದೇವಾಲಯವನ್ನು ಕ್ರಿ.ಶ. 850 ರಲ್ಲಿ ಪಲ್ಲವರು ಕಟ್ಟಿದರು ಎಂದು ನಂಬಲಾಗಿದ್ದು, ಅಧಿಕೃತವಾದ ಯಾವುದೆ ದಾಖಲೆಗಳಿಲ್ಲ. ರಾಜ ರಾಜ ಚೋಳ ಮತ್ತು ಕೃಷ್ಣದೇವರಾಯ ಈ ದೇವಾಲಯವನ್ನು ನವೀಕರಣಗೊಳಿಸಿದ್ದರು ಎಂದು ಹೇಳಲಾಗಿದೆ. ಈ ದೇವಾಲಯವನ್ನು ಇಲ್ಲಿ ಮೊದಲಿದ್ದ ಹಳೆಯ ಇಟ್ಟಿಗೆಯಿಂದ ಕಟ್ಟಿದ ದೇವಾಲಯದ ಮೇಲೆ ಕಟ್ಟಲಾಗಿದೆ.
ಇದು ತಮಿಳುನಾಡಿನಲ್ಲಿಯೇ ಅತ್ಯಂತ ಹಳೆಯದಾದ ದೇವಾಲಯವಾಗಿದೆ ಹಾಗೂ ಪಲ್ಲವ ಪೂರ್ವಕಾಲದ ಉಳಿದ ಎರಡು ದೇವಾಲಯಗಳಲ್ಲಿ ಇದೂ ಒಂದಾಗಿದೆ. ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಡಾ. ಟಿ.ಸತ್ಯಮೂರ್ತಿಯವರ ಪ್ರಕಾರ, ಇಲ್ಲಿನ ವಾಸ್ತುಶಿಲ್ಪದ ರಚನೆ ಎಷ್ಟು ಉತ್ಕೃಷ್ಟ ಮಟ್ಟದಲ್ಲಿದೆ ಎಂದರೆ ಇದನ್ನು ಕಟ್ಟಿ ಎಷ್ಟೋ ವರ್ಷಗಳಾದರೂ ದೇವಾಲಯ ಪಾಳು ಬಿದ್ದ ಸ್ಥಿತಿಯಲ್ಲಿದ್ದರೂ ಇದರ ಇಟ್ಟಿಗೆಗಳು ಹಾಗೂ ಕಟ್ಟಡ ಹಾಗೆಯೇ ಇದೆ.


Click it and Unblock the Notifications