Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಪೆರುಂಬುದೂರು » ಆಕರ್ಷಣೆಗಳು » ವಲ್ಲಕೊಟ್ಟಾಯಿ ಮುರುಗನ್ ದೇವಾಲಯ

ವಲ್ಲಕೊಟ್ಟಾಯಿ ಮುರುಗನ್ ದೇವಾಲಯ, ಶ್ರೀಪೆರುಂಬುದೂರು

3

ಶ್ರೀಪೆರುಂಬುದೂರಿನಿಂದ ಕೇವಲ 9 ಕಿ.ಮೀ ದೂರದಲ್ಲಿರುವ ವೆಲ್ಲಕೊಟ್ಟಾಯಿ ಗ್ರಾಮದಲ್ಲಿರುವ ವೆಲ್ಲಕೊಟ್ಟಾಯಿ ಮುರುಗನ್ ದೇವಾಲಯ ಸುಮಾರು 1200 ವರ್ಷಗಳಷ್ಟು ಹಳೆಯದು. ಇಲ್ಲಿ 7 ಅಡಿ ಎತ್ತರದ ಮುರುಗನ್ ದೇವರ ಮೂರ್ತಿ ಇದೆ. ಇದು ತಮಿಳು ನಾಡಿನಲ್ಲಿರುವ ದೇವರ ವಿಗ್ರಹಗಳಲ್ಲೇ ಎತ್ತರವಾದದ್ದು. ಮುರುಗನ್ ದೇವರ ಭಕ್ತರಾದ ತೆಯ್ವಾಯನಿ ಮತ್ತು ವಲ್ಲಿ ವಿಗ್ರಹಗಳು ಎರಡು ಬದಿಗಳಲ್ಲಿ ಇವೆ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ ಋಷಿ ಧೂರ್ವಾಸುರನ ಸಲಹೆಯಂತೆ ಭಗೀರಥ ರಾಜ ತನ್ನ ರಾಜ್ಯವನ್ನು ಮರಳಿ ಪಡೆಯಲು ಈ ದೇವಾಲಯವನ್ನು ಕಟ್ಟಿದನು. ಇನ್ನೊಂದು ಕಥೆಯ ಪ್ರಕಾರ ವಲ್ಲನ್ ರಾಕ್ಷಸನು ದೇವರಿಗೆ ನಿರಂತರವಾಗಿ ತೊಂದರೆ ನೀಡುತ್ತಿದ್ದನು ಈ ಸ್ಥಳದಲ್ಲಿ ಶಾಂತತೆಯನ್ನು ಕಾಪಾಡಲು ಮುರುಗನ್ ದೇವರು ಆ ರಾಕ್ಷಸನನ್ನು ಸೋಲಿಸಿದನು.

ಇದಕ್ಕಾಗಿ ಇಲ್ಲಿ ಆತನ ದೇವಾಲಯವನ್ನು ಕಟ್ಟಲಾಗಿದೆ. ಇಲ್ಲಿ ಒಂದು ಕೊಳವಿದೆ ಇದನ್ನು ವಜ್ರ ತೀರ್ಥಂ ಎಂದು ಕರೆಯಲಾಗುತ್ತದೆ. ಇದನ್ನು ಇಂದ್ರ ದೇವನ ವಜ್ರ ಆಯುಧದಿಂದ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇಂದ್ರ ದೇವನು ಸುಬ್ರಹ್ಮಣ್ಯ ದೇವರನ್ನು ಪೂಜಿಸಲು ಈ ಕೊಳವನ್ನು ಬಳಸುತ್ತಿದ್ದನು. ಇಲ್ಲಿ ಶ್ರೀ ವಿನಾಯಗರ್, ಶ್ರೀ ಅಂಬಾಲ್, ಉತ್ಸವ ಮುರುಗರ್ ಮತ್ತು ಶ್ರೀ ಶಣ್ಮುಗರ್ ದೇವರ ಮುರ್ತಿಗಳಿವೆ. ತಪಸ್ ಕಾಮಾಕ್ಷಿ ಮತ್ತು ರಾಮ ದೇವರು ತನ್ನ ಪರಮ ಭಕ್ತ ಆಂಜನೇಯನನ್ನು ಅಪ್ಪಿಕೊಳ್ಳುವ ಮೂರ್ತಿಗಳು ಅರ್ಧ ಮಟಪಂ ಸ್ತಂಭಗಳಲ್ಲಿ ಇದೆ. ಈ ದೇವಾಲಯದ ಭೇಟಿಯ ವೇಳೆ: ಬೆಳಗ್ಗೆ 5.30 ರಿಂದ ಮಧ್ಯಾಹ್ನ 1 ಹಾಗೂ ಸಂಜೆ 3 ರಿಂದ ರಾತ್ರಿ 8.30

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu