ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ನೋಡಲೇಬೇಕಾದ ಸ್ಥಳವೆಂದರೆ ಶೃಂಗೇರಿಯ ಮುಖ್ಯ ಆಕರ್ಷಣೆಗಳಲ್ಲಿ ಒಂದೆಂದೇ ಬಿಂಬಿತವಾಗಿರುವ 'ಆದಿ ಶಂಕರ ದೇವಸ್ಥಾನ' ವನ್ನು. ಈ ದೇವಸ್ಥಾನವನ್ನು ಅದ್ವೈತ ಸಿದ್ದಾಂತವನ್ನು ಎಲ್ಲೆಡೆ ಪಸರಿಸಿದ ಸಂತ ಆದಿ ಶಂಕರಾಚಾರ್ಯರಿಗೆ ಮುಡುಪಿಡಲಾಗಿದೆ. ಇಲ್ಲಿ ಆದಿ ಶಂಕರಾಚಾರ್ಯರ ಮೋಹಕ ಮತ್ತು ಸುಂದರವಾಗಿರುವ ವಿಗ್ರಹವನ್ನು ಎರಡು ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾಗಿರುವುದನ್ನು ದೇವಸ್ಥಾನದಲ್ಲಿ ಕಾಣಬಹುದು. ವಿಗ್ರಹವು ಯೋಗ ಮುದ್ರೆಯಲ್ಲಿದ್ದು, ಲಿಂಗದ ಎದುರು ಸ್ಥಾಪಿಸಲಾಗಿದೆ. ಪ್ರವಾಸಿಗರು ದೇವಾಲಯದ ಆವರಣದಲ್ಲಿ ಶಂಕರಾಚಾರ್ಯರ ಹಿಂಬಾಲಕರ ಪ್ರತಿಮೆಗಳನ್ನೂ ಕಾಣಬಹುದು. ದೇವಾಲಯದಲ್ಲಿ 'ಪಂಚಾಮೃತ' 'ಅಭಿಷೇಕ' 'ಅರ್ಚನೆ' ಮುಂತಾದ ಧಾರ್ಮಿಕ ಕಾರ್ಯಗಳು ನಿತ್ಯವೂ ನಡೆಯುತ್ತವೆ. ಯಾತ್ರಾರ್ಥಿಗಳು ಈ ದೇವಸ್ಥಾನವನ್ನು ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆ ವರಗೆ ಮತ್ತು ಸಂಜೆ 5 ರಿಂದ ರಾತ್ರಿ 8.30 ರ ವರಗೆ ಸಂದರ್ಶಿಸಬಹುದು.


Click it and Unblock the Notifications