Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಆಕರ್ಷಣೆಗಳು » ವಿದ್ಯಾ ಶಂಕರ ದೇವಸ್ಥಾನ

ವಿದ್ಯಾ ಶಂಕರ ದೇವಸ್ಥಾನ, ಶೃಂಗೇರಿ

2

ಪ್ರವಾಸಿಗರಿಗೆ ಸಮಯಾವಕಶವಿದ್ದರೆ ಶ್ರೀ ವಿದ್ಯಶಂಕರರಿಗೆ ಮುಡುಪಾದ ಈ ದೇವಸ್ಥಾನವನ್ನು ಸಂದರ್ಶಿಸಬಹುದು. ಈ ಪುಣ್ಯ ಸ್ಥಳವನ್ನು ಕ್ರಿಸ್ತ ಶಕ ೧೩೩೮ ರಲ್ಲಿ ಇಲ್ಲೇ ಸುಮಾರು ೧೪ನೆ ಶತಮಾನದಲ್ಲಿ  ವಾಸವಾಗಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರ ಗುರುಗಳಾದ ಸಂತ ವಿದ್ಯಾರಣ್ಯರು ಕಟ್ಟಿಸಿದರು. ಈ ದೇವಸ್ಥಾನವು ದ್ರಾವಿಡ, ಚಾಲುಕ್ಯ, ದಕ್ಷಿಣ ಭಾರತ ಮತ್ತು ವಿಜಯನಗರದ ವಾಸ್ತು ಶಿಲ್ಪ ಶೈಲಿಯನ್ನು ಹೋಲುತ್ತದೆ. ಪ್ರವಾಸಿಗರು ವಿಜಯನಗರ ಸಾಮ್ರಾಜ್ಯದ ಕೊಡುಗೆಯನ್ನು ವರ್ಣಿಸುವ ಹಲವಾರು ಕೆತ್ತನೆಯೆನ್ನು ಇಲ್ಲಿ ಕಾಣಬಹುದು. ಈ ಚತುಷ್ಕೋನ ದೇವಾಲಯ ರಾಶಿ ಕಂಬಗಳು ಎಂದೇ ಖ್ಯಾತವಾಗಿರುವ ೧೨ ಕಂಬಗಳನ್ನು ಹೊಂದಿದೆ. ಎಲ್ಲ ಕಂಬಗಳು ಕಗೋಳ ಶಾಸ್ತ್ರಕ್ಕನುಗುಣವಾಗಿ ಕೆತ್ತಲ್ಪಟ್ಟ  ೧೨ ರಾಶಿ ಚಕ್ರ ಚಿನ್ಹೆಗಳನ್ನು ಪ್ರದರ್ಶಿಸುತ್ತವೆ. ದುರ್ಗಾ ಮಾತೆ, ವಿದ್ಯಾ ಗಣೇಶ ಮುಂತಾದ ವಿಗ್ರಹಗಳನ್ನು ದೇವಸ್ಥಾನದ ಗರ್ಬಗುಡಿಯಲ್ಲಿ ಕಾಣಬಹುದು. ಇದರ ಜೊತೆಗೆ ಬ್ರಹ್ಮ, ವಿಷ್ಣು, ಮಹೇಶ್ವರರ ವಿಗ್ರಹ ಗಳನ್ನೂ ಗರ್ಬಗುಡಿಯಲ್ಲಿ ಕಾಣಬಹುದು. ಸುಂದರವಾದ ವಾಸ್ತುಶಿಲ್ಪ ಪ್ರದರ್ಶಿಸುವ ದೇವಾಲಯದ ಒಳ ತಾರಸಿ ಇನ್ನೊಂದು ಮುಖ್ಯ ವೈಶಿಷ್ಟ್ಯ.ಈ ಕ್ಷೇತ್ರದ ಇತರೆ ದೇವಾಲಯಗಳ ತಾರಸಿಗಳು ಕೂಡ ಇಳಿಜಾರು ಚಪ್ಪಡಿ ವಿನ್ಯಾಸ ಹೊಂದಿದ್ದು ಬಹಳ ಪ್ರಸಿದ್ದಿಯಾಗಿವೆ.

ದೇವಾಲಯದ ತಳಮನೆ ಸುಂದರವಾದ ವಿಷ್ಣು, ಶಿವ, ದಶಾವತಾರಗಳು, ಷಣ್ಮುಖ, ಕಾಳಿ ಮಾತೆ, ವಿವಿಧ ಬಗೆಯ ಶಿಲ್ಪಗಳಿಂದ ಕಂಗೊಳಿಸುತ್ತದೆ. ಕಡೆಯದಾಗಿ, ಈ ದೇವಾಲಯವು ಇಲ್ಲಿ ಕಾರ್ತೀಕ ಶುಕ್ಲ ಪಕ್ಷದಂದು ಆಚರಿಸಲಾಗುವ ವಿದ್ಯಾತೀರ್ಥ  ರಥೋತ್ಸವಕ್ಕಾಗಿ ಬಹಳ ಖ್ಯಾತವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat