Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಆಕರ್ಷಣೆಗಳು » ಶಾರದಾ ದೇವಸ್ಥಾನ

ಶಾರದಾ ದೇವಸ್ಥಾನ, ಶೃಂಗೇರಿ

3

ಶೃಂಗೇರಿ ಪ್ರವಾಸಿಗರು 'ನೋಡಲೇಬೇಕಾದ' ಸ್ಥಳ ಶಾರದಾಂಬ ದೇವಸ್ಥಾನವೆಂದೇ ಖ್ಯಾತವಾಗಿರುವ ಶಾರದಾ ದೇವಸ್ಥಾನ. ಕಲಿಕೆ ಮತ್ತು ಪಾಂಡಿತ್ಯಕ್ಕೆ ಅಧಿದೇವತೆಯಾದ  ಶಾರದಾಂಬ ಮಾತೆಗೆ ಅರ್ಪಿತವಾಗಿರುವ 'ದಕ್ಷಿಣಂನಾಯ ಪೀಠ' ವನ್ನು ಆಚಾರ್ಯ ಶ್ರೀ ಶಂಕರ ಭಗವತ್ಪಾದರು ಸುಮಾರು ೭ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿದರು. ಪುರಾಣಗಳ ಪ್ರಕಾರ ೧೪ ನೇ ಶತಮಾನದಲ್ಲಿ ಮೂಲತಃ ಶ್ರೀಗಂಧದಿಂದ  ಮಾಡಲ್ಪಟ್ಟಿದ್ದ ಈ ಪುರಾತನ ವಿಗ್ರಹವನ್ನು ಚಿನ್ನ ಮತ್ತು ಕಲ್ಲಿನ ವಿಗ್ರಹಕ್ಕೆ ಬದಲಾಯಿಸಲಾಯಿತು. ಅಲ್ಲಿ ಮತ್ತೊಂದು ಲಿಂಗವಿದೆ ಅದು ಆ ಶಿವ ಪರಮಾತ್ಮನೇ ನೇರವಾಗಿ ಶಂಕರಾಚಾರ್ಯರಿಗೆ ಕೊಡುಗೆಯಾಗಿ ಕೊಟ್ಟದ್ದೆಂದು ನಂಬಲಾಗಿದೆ.

 

ಈ ದೇವಾಲಯವು ಒಂದು ಕಾಲದ ಬೆಂಕಿ ಅನಾಹುತದಿಂದ ಹಾಳಾದ ಸ್ಥಿತಿ ತಲುಪಿತ್ತು ಆದರೆ ನಂತರ ಇದನ್ನು ದಕ್ಷಿಣ ಭಾರತದ ವಾಸ್ತುಶಿಲ್ಪದ ಶೈಲಿಯಲ್ಲಿ ಪುನರ್ ನಿರ್ಮಿಸಲಾಯಿತು. ಹಾಗೆಯೆ ದೇವಾಲಯದ ಒಳಗಿರುವ ಮಹಾ ಮಂಟಪದಲ್ಲಿ ಕೆತ್ತನೆ ಮಾಡಿದ ದ್ವಾರಪಾಲಕರು, ದುರ್ಗಾ ಮಾತೆ, ಮತ್ತು ರಾಜ ರಾಜೇಶ್ವರಿ ಮಾತೆಯ ವಿಗ್ರಹಗಳಿವೆ. ಪ್ರವಾಸಿಗರು ಅಷ್ಟ ಲಕ್ಷ್ಮಿ ಚಿತ್ರದ ಜೊತೆಗೆ ೮ ಚಿನ್ನ ಲೇಪಿತ ಪಲಕಗಳನ್ನು ಬಾಗಿಲ ದಾರಿಯಲ್ಲಿ ನೋಡಬಹುದು. ದೇವಾಲಯದ ಶಿಲ್ಪ ಕಲಾಕೃತಿಗಳನ್ನು ತಮಿಳು ನಾಡಿನಲ್ಲಿ ಪ್ರಚಲಿತವಿದ್ದ ಶಿಲ್ಪ ಶಾಸ್ತ್ರದಿಂದ ಪ್ರಭಾವಿತಗೊಂಡು ಕೆತ್ತಿರುವುದನ್ನು ಕಾಣಬಹುದು.

ಈ ದೇವಸ್ಥಾನದಲ್ಲಿ ನವರಾತ್ರಿ ಮತ್ತು ವಿಶೇಷ ಚೈತ್ರ ಶುಕ್ಲ ಪೂರ್ಣಿಮಾ ಪೂಜೆ ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ. ಸ್ಥಳೀಯರು ದೀಪೋತ್ಸವವನ್ನು ಕಾರ್ತಿಕ ಪೂರ್ಣಿಮೆಯೆಂದು ಹಾಗು , ಲಲಿತ ಪಂಚಮಿ ಯನ್ನು ಮಾಘ ಶುಕ್ಲ ಪಂಚಮಿ ಯಂದು ಮತ್ತು ಶ್ರೀ ಶಾರದಾಂಬ ರಥೋತ್ಸವವನ್ನು  ಮಾಘ ತೃತೀಯ ದಂದು ಈ ಪುಣ್ಯಕ್ಷೇತ್ರದಲ್ಲಿ ಆಚರಿಸುತ್ತಾರೆ. ಪ್ರವಾಸಿಗರು ಇಲ್ಲಿರುವ  ಶ್ರೀ ಶಕ್ತಿ ಗಣಪತಿ ದೇವಸ್ಥಾನವನ್ನು ಕೂಡ ನೋಡಬಹುದು. ಇದು ದೇವಾಲಯದ  ದಕ್ಷಿಣ ದಿಕ್ಕಿನಲ್ಲಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri