Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಶ್ರೀ ಪ್ರತಾಪ್ ಸಿಂಗ್ ವಸ್ತು ಸಂಗ್ರಹಾಲಯ

ಶ್ರೀ ಪ್ರತಾಪ್ ಸಿಂಗ್ ವಸ್ತು ಸಂಗ್ರಹಾಲಯ, ಶ್ರೀನಗರ

1

ಶ್ರೀ ಪ್ರತಾಪ್ ಸಿಂಗ್ (ಎಸ್.ಪಿ.ಎಸ್) ವಸ್ತುಸಂಗ್ರಹಾಲಯ ಕ್ರಿ.ಶ. 1898 ರಲ್ಲಿ ನಿರ್ಮಾಣಗೊಂಡಿತು. ಇದು ಝೀಲಮ್ ನದಿಯ ತೀರದಲ್ಲಿ ಇದೆ. ತೋಶ್ ಖಾನಾ ಭಂಡಾರದಿಂದ ದೊರೆತ ಶಾಲುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಮೊದಲು ಇಲ್ಲಿ ಪ್ರದರ್ಷನಕ್ಕಿಡಲಾಗಿತ್ತು. ಪರಿಹಸ್ಪೊರಾ, ಆವಂತಿಪುರ ಮತ್ತು ಪಂಡರಿನಾಥನ್ ನಲ್ಲಿ ಭೂಮಿಯನ್ನು ಅಗೆದಾಗ ದೊರೆತ ವಸ್ತುಗಳನ್ನು ಇಲ್ಲಿ ಮೊದಲ ಬಾರಿ ಇಡಲಾಗಿತ್ತು. ಬೌದ್ಧ ತಾಣ ಉಶ್ಕೂರುನಿಂದ ದೊರೆತ ಹಲವು ಮಣ್ಣಿನ ವಸ್ತುಗಳನ್ನು ಇಲ್ಲಿ ಇಡಲಾಗಿದೆ. ಇವು ಮೂರನೆಯ ಶತಮಾನಕ್ಕೆ ಸೇರಿದವು ಎಂದು ನಂಬಲಾಗಿದೆ.

ಬೌದ್ಧ ಭಿಕ್ಷು ಲೊಕೇಶ್ವರನ ಹಳೆಯ ಕಾಲದ ಹಿತ್ತಾಳೆಯ ವಿಗ್ರಹ ಮತ್ತು ಹಸಿರು ಬಣ್ಣದ ದೊಡ್ಡ ಹಕ್ಕಿಯಾದ ಗರುಡನ ಮೇಲೆ ಕೂತ ವಿಷ್ಣುವಿನ ವಿಗ್ರಹ ಇಲ್ಲಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಐದನೇಯ ಶತಮಾನದ ಬುದ್ಧನ ತಾಮ್ರದ ವಿಗ್ರಹವು ಗಾಂಧಾರ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ.

ಇಲ್ಲಿರುವ ಅಗಾಧ ಪ್ರಮಾಣದ ವಿಗ್ರಹ ಮತ್ತು ವಸ್ತುಗಳನ್ನು ಅವುಗಳ ಕಾಲ, ಶೈಲಿ ಮತ್ತು ವಸ್ತುವಿನ ಆಧಾರದ ಮೇಲೆ ವರ್ಗೀಕರಿಸಿ ಇಡಲಾಗಿದೆ. ಇವನ್ನು ಇಲ್ಲಿ ನಾಣ್ಯಶಾಸ್ತ್ರ, ಹಸ್ತಪ್ರತಿಗಳು, ಸೂಕ್ಷ್ಮ ಚಿತ್ರಕಲೆ, ಶಸ್ತ್ರಾಸ್ತ್ರ ಮತ್ತು ಆಯುಧಗಳು, ಹುಲ್ಲು ಮತ್ತು ವಿಲ್ಲೋ ಕೆಲಸ, ಪೀಠೋಪಕರಣಗಳು ಮತ್ತು ಅಲಂಕಾರಿಕೆ ವಸ್ತುಗಳು ಮತ್ತು ಸಂಗೀತದ ವಸ್ತುಗಳು ಎಂದು ವರ್ಗೀಕರಿಸಲಾಗಿದೆ. ಇತರ ಕೆಲವು ವರ್ಗಗಳೆಂದರೆ: ಬಟ್ಟೆಗಳು ಮತ್ತು ಕಾರ್ಪೆಟ್ ಗಳು, ಚರ್ಮದ ವಸ್ತುಗಳು, ಶಿಲ್ಪಕಲೆಗಳು, ಕಾಶ್ಮೀರದ ಉತ್ಖನನ ದ ವೇಳೆ ಸಿಕ್ಕ ಕೆಲವು ಟೈಲ್ಸ್ ಗಳು ಮತ್ತು ಪ್ರಾಣಿ ಮತ್ತು ಪಕ್ಷಿಗಳು ಎಂಬ ವರ್ಗೀಕರಣಗಳಿವೆ.

One Way
Return
From (Departure City)
To (Destination City)
Depart On
21 Jun,Sun
Return On
22 Jun,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
21 Jun,Sun
Check Out
22 Jun,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
21 Jun,Sun
Return On
22 Jun,Mon