ಶ್ರೀನಗರದ ಒಂದು ಅತಿ ಪವಿತ್ರವಾದ ಮಸೀದಿ ಎಂದು ಪರಿಗಣಿಸಲಾಗಿರುವ ಮಖ್ ದುಮ್ ಸಾಹಿಬ್ ಮಸೀದಿಯನ್ನು ಹಝರತ್ ಸುಲ್ತಾನ್ ಎಂದು ಕರೆಯಿಸಿಕೊಳ್ಳುತ್ತಿದ್ದ ಸೂಫಿ ಸಂತ ಮಖ್ ದುಮ್ ಸಾಹಿಬ್ ರವರಿಗೆ ಅರ್ಪಿಸಲಾಗಿದೆ. ಇದನ್ನು ಹರಿ ಪರ್ಬತ್ ಕೋಟೆಯ ದಕ್ಷಿಣಕ್ಕೆ ಕಟ್ಟಲಾಗಿದೆ ಹಾಗೂ ಇದೊಂದು ಎರಡು ಅಂತಸ್ತುಗಳಿರುವ ಕಟ್ಟಡವಾಗಿದೆ. ಇದನ್ನೂ ಕೂಡ ಮೊಘಲ್ ಶೈಲಿಯಲ್ಲಿ ಕಟ್ಟಲಾಗಿದೆ.
ಒಂದು ನಂಬಿಕೆಯ ಪ್ರಕಾರ, ಮಖ್ ದುಮ್ ಸಾಹಿಬ್ ಹಲವು ವಿಶೇಷವಾದ ಶಕ್ತಿಗಳನ್ನು ಹೊಂದಿದ್ದರು; ಇದೇ ನಂಬಿಕೆಯ ಕಾರಣ ಇಲ್ಲಿಗೆ ಜಾತಿ, ಧರ್ಮ ಅಥವಾ ಇನ್ಯಾವುದೇ ರೀತಿಯ ಬಂಧವಿಲ್ಲದೆ ಎಲ್ಲರೂ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಇದು ವರ್ಷದಾದ್ಯಂತ ಪ್ರವಾಸಿಗರ ಭೇಟಿಗಾಗಿ ತೆರೆದಿರುತ್ತದೆ.


Click it and Unblock the Notifications