ಚಾರಣ ಮಾಡುವುದು ಸೋನಾಮಾರ್ಗ್ ಪ್ರದೇಶದ ಅತ್ಯಂತ ಜನಪ್ರಿಯ ಚಟುವಟಿಕೆಗಳಲ್ಲಿ ಒಂದಾಗಿದೆ. ಇಲ್ಲಿನ ಹಿಮ ಪರ್ವತ ಶಿಖರಗಳು ಮತ್ತು ಸುಂದರ ಪರ್ವತ ಪ್ರದೇಶಗಳು ಸೌಮ್ಯ ಮತ್ತು ಸವಾಲಿನ ಚಾರಣಕ್ಕೆ ಸರಿಹೊಂದುವಂತಿದೆ. ಸೋನಾಮಾರ್ಗ್ ದ ಗಂಗಾಬಲ, ವಿಶನ್ ಸರ್, ಗಡ್ಸರ್, ಸತ್ಸರ್ ಮತ್ತು ಕೃಷ್ಣಾಸರ್ ಸರೋವರಗಳು ಪ್ರಮುಖ ಚಾರಣ ಪ್ರದೇಶಗಳು. ಈ ಸ್ಥಳದ ಹವಾಮಾನ ಬೇಸಿಗೆಯಲ್ಲಿ ಆಹ್ಲಾದಕರವಾಗಿದ್ದು, ಚಳಿಗಾಲದಲ್ಲಿ ಭಾರೀ ಹಿಮಪಾತ ಸಂಭವಿಸುತ್ತದೆ.