'ಹೂವುಗಳ ಕಣಿವೆ' ಎಂದು ಕರೆಯಲ್ಪಡುವ ಗಡ್ಸರ್ ಸರೋವರ, ಸಮುದ್ರ ಮಟ್ಟದಿಂದ 5000 ಮೀಟರ್ ಎತ್ತರದಲ್ಲಿದೆ. ಇದು ಸೋನಾಮರ್ಗ್ ದಿಂದ 28 ಕಿ.ಮೀ ದೂರದಲ್ಲಿದೆ. ಹಿಮಾಲಯದ ಸುಂದರ ಆಕರ್ಷಕ ದೃಶ್ಯಗಳ ನಡುವೆ ಕಂಡುಬರುವ ಈ ಸರೋವರ, ಈ ಪ್ರದೇಶದಲ್ಲಿಯೇ ಅತ್ಯಧಿಕ ಎತ್ತರದ ಸರೋವರ ಎನಿಸಿದೆ. ಕಾಶ್ಮೀರಿ ಭಾಷೆಯಲ್ಲಿ ಗಡ್ಸರ್ ನ ನಿಜವಾದ ವಾಚ್ಯಾರ್ಥ 'ಮೀನುಗಳ ಸರೋವರ' ಎಂದಾಗಿದೆ. ಈ ಸರೋವರ 0.85 ಕಿಲೋಮೀಟರ್ ವರೆಗೆ ವ್ಯಾಪಿಸಿದೆ ಮತ್ತು 0.76 ಕಿ.ಮೀ ಅಗಲವನ್ನು ಹೊಂದಿದೆ. ಆಲ್ಪೈನ್ ಹೂಗಳಿಂದ ಸುತ್ತುವರಿದ ಈ ಸರೋವರ ನವೆಂಬರ್ ಮತ್ತು ಏಪ್ರಿಲ್ ತಿಂಗಳಲ್ಲಿ ಹೆಪ್ಪುಗಟ್ಟುತ್ತದೆ. ಮೀನುಗಾರಿಕೆಯಲ್ಲಿ ಆಸಕ್ತಿಯುಳ್ಳ ಪ್ರವಾಸಿಗರು ಇಲ್ಲಿ ಭೇಟಿ ನೀಡಿ, ಈ ಪ್ರದೇಶದ ಜನಪ್ರಿಯ ಚಟುವಟಿಕೆಗಳಲ್ಲಿ ಒಂದಾದ ಸಿಹಿನೀರಿನ ಮೀನುಗಾರಿಕೆಯನ್ನು ಆನಂದಿಸಬಹುದು. ವಿಶನ್ ಸರ್ ಸರೋವರ ಮತ್ತು ಕೃಷ್ಣಾಸರ್ ಸರೋವರ ಇತರೆ ಹತ್ತಿರದ ಪ್ರವಾಸಿ ಆಕರ್ಷಣೆಗಳಾಗಿವೆ.