Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ಆಕರ್ಷಣೆಗಳು » ಬುಡಕಟ್ಟು ಸಾಂಸ್ಕೃತಿಕ ಮ್ಯೂಸಿಯಂ

ಬುಡಕಟ್ಟು ಸಾಂಸ್ಕೃತಿಕ ಮ್ಯೂಸಿಯಂ, ಸಿಲ್ವಾಸ್ಸಾ

0

ಬುಡಕಟ್ಟು ಸಾಂಸ್ಕೃತಿಕ ಮ್ಯೂಸಿಯಂ ಅನ್ನು ಇಲ್ಲಿನ ಶ್ರೀಮಂತ ಪರಂಪರೆ ಹಾಗೂ ಜೀವನ, ಸಮಾಜ, ಸಂಸ್ಕೃತಿ, ನಾಗರಿಕತೆಯ ಮತ್ತು ಈ ಪ್ರದೇಶದ ಬುಡಕಟ್ಟು ಜನರ ಸಂಸ್ಕೃತಿ ಮೂಲರೂಪ ವೈಭವವನ್ನು ನಿರೂಪಿಸುವ ಮತ್ತು ಸಂರಕ್ಷಿಸುವ ಸಲುವಾಗಿ ಸ್ಥಾಪಿಸಲಾಗಿದೆ.

ಇದು ನಗರದ ಮಧ್ಯ ಭಾಗದಲ್ಲಿದ್ದು ಇದರ ಪ್ರವೇಶ ಭಾಗವನ್ನು ತೋರಣ ಮತ್ತು ಹಾರಗಳಿಂದ ಸಿಂಗರಿಸಲಾಗಿದೆ. ಈ ಅಂಗಣದಲ್ಲಿ ಬುಡಕಟ್ಟು ವಸ್ತ್ರವನ್ನು ಧರಿಸಿರುವುದನ್ನು ಮಾದರಿಯಾಗಿ ತೋರಿಸಲಾಗುತ್ತದೆ. ಮನುಷ್ಯಾಕೃತಿಯನ್ನು ಎಷ್ಟು ಸುಂದರವಾಗಿ ಕೆತ್ತಲಾಗಿದೆ ಎಂದರೆ ಅದನ್ನು ಸ್ಪರ್ಶಿಸದೇ ಇರಲು ಸಾಧ್ಯವೇ ಇಲ್ಲ ಮತ್ತು ನೋಡಲೇಬೇಕು ಎಂಬಂತಿದೆ.

ಬುಡಕಟ್ಟು ಜೀವನದ ವಿವಿಧ ಅಂಶಗಳನ್ನು ಸಂಗ್ರಹಿಸಿಡಲಾದ ಈ ಮ್ಯೂಸಿಯಂ ಗೆ ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ. ಪುರುಷರು ಮತ್ತು ಮಹಿಳೆಯರು ಬಳಸುವ ಆಭರಣಗಳು, ದಿನನಿತ್ಯದ ವಸ್ತುಗಳು, ಮನೆಬಳಕೆಯ ವಸ್ತುಗಳು, ಅಡುಗೆ ಸಾಮಗ್ರಿಗಳು, ಕೃಷಿ ಮತ್ತು ಭೇಟೆ ವಸ್ತುಗಳು, ಸಂಗೀತ ವಾದ್ಯಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.

ಕಠಾರಿಗಳು, ಭರ್ಚಿಗಳು, ಬಿಲ್ಲುಗಳು, ಬಾಣಗಳು, ಹಳೆಯ ಶೈಲಿ ಮಸ್ಕೆಟ್, ಬಾಗುಕತ್ತಿಗಳನ್ನು, ಗುರಾಣಿಗಳು ಮತ್ತು ಮದುವೆ ಉಡುಪುಗಳು ಮತ್ತು  ಸಾಂಸ್ಕೃತಿಕ ಮತ್ತು ಸಾಮಾಜಿಕ ಘಟನೆಗಳ ಛಾಯಾಚಿತ್ರಗಳು, ಹಲವಾರು ಕಲಾಕೃತಿಗಳು, ಇವುಗಳಿಂದ ಮ್ಯೂಸಿಯಂ ನ ಗೋಡೆಗಳು ಅಲಂಕೃತಗೊಂಡಿವೆ. ಡುಬ್ಲ ಬುಡಕಟ್ಟು ಜನರಿಂದ ಮಾಡಲಾಗುತ್ತಿದ್ದ ಘೆರಿಯ ನೃತ್ಯದ ಛಾಯಾಚಿತ್ರಗಳು, ಕೊಂಕಣ ಬುಡಕಟ್ಟಿನವರು ಧರಿಸುತ್ತಿದ್ದ ಬೋಹದ್ದಾ ಮುಖವಾಡಗಳು, ತುರ್ ನೃತ್ಯಗಾರಾಗ ಪಿರಾಮಿಡ್ ಗಳು ಮುಂತಾದವುಗಳನ್ನು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
15 Sep,Tue
Return On
16 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
15 Sep,Tue
Check Out
16 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
15 Sep,Tue
Return On
16 Sep,Wed