Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ಆಕರ್ಷಣೆಗಳು » ವಂಗಂಗಾ ಸರೋವರ

ವಂಗಂಗಾ ಸರೋವರ, ಸಿಲ್ವಾಸ್ಸಾ

2

ದಾದ್ರ ಮತ್ತು ನಗರ್ ಹವೇಲಿ ಪ್ರವೇಶದ ಹತ್ತಿರವೇ ವಂಗಂಗಾ ಸರೋವರವಿದೆ, ಸಿಲ್ವಾಸ್ಸಾದಿಂದ ಕೇವಲ 5 ಕಿ.ಮೀ ಅಂತರದಲ್ಲಿದೆ. ದಾದ್ರಾ ಉದ್ಯಾನವನದ ಜೊತೆಗೆ ಇರುವ ಸರೋವರವು ಈ ಸ್ಥಳವನ್ನು ಆ ಸುತ್ತಮುತ್ತಲಿನ ಅತ್ಯಂತ ಆಧುನಿಕ ಮನೋರಂಜನಾ ತಾಣವನ್ನಾಗಿಸಿದೆ. ಈ ಉದ್ಯಾನವನವು ಎತ್ತರವಾದ ಮರಗಳಿಂದ ಸುತ್ತ್ತುವರೆದಿದ್ದು ಇಲ್ಲಿ ಬರುವ ಯಾತ್ರಿಕರಿಗೆ ಪೆಡಲ್ ದೋಣಿ, ಗ್ರಾಮೀಣ ಶೈಲಿಯ ಸೇತುವೆಗಳು, ಹುಲ್ಲುಛಾವಣಿಯ ಕುಟೀರಗಳು ಮತ್ತು  ಕಾರಂಜಿಗಳನ್ನು ಒಳಗೊಂಡಿದೆ.

ಹಾಡುಗಳು ಮತ್ತು ನೃತ್ಯಗಳನ್ನೂ ಚಿತ್ರೀಕರಿಸಲು ಬರುವ ಬಾಲಿವುಡ್ ನ ಚಲನಚಿತ್ರ ನಿರ್ದೇಶಕರಿಗೆ ಇದು ನೆಚ್ಚಿನ ಶೂಟಿಂಗ್ ತಾಣವಾಗಿದೆ. ಇದು ಪ್ರವಾಸಿಗರಿಗೆ ಏಕೆ ವಂಗಂಗಾ ಸರೋವರ ನಿಕಟವಾಗಿದೆ ಎನ್ನುವುದನ್ನು ತಿಳಿಸುತ್ತದೆ.

ಇಲ್ಲಿನ ಉದ್ಯಾನವನ ಮತ್ತು ಸರೋವರವು ಸಂಗಾತಿಗಳಿಗೆ, ಕುಟುಂಬದವರಿಗೆ, ಮಧುಚಂದ್ರಕ್ಕೆ ಬಂದವರಿಗೆ ಇಷ್ಟದ ಸ್ಥಳವಾಗಿದೆ. ಕುಟುಂಬಗಳು ಮತ್ತು ಮಕ್ಕಳು ದೋಣಿ ಸವಾರಿಯನ್ನು ಆನಂದಿಸುತ್ತಿದ್ದರೆ ಹೊಸದಾಗಿ ಮದುವೆಯಾದ ದಂಪತಿಗಳು ಏಕಾಂತವನ್ನು ಆನಂದಿಸುವುದು ಇಲ್ಲಿ ಕಂಡುಬರುತ್ತದೆ.

ತಾಜಾ ಗಾಳಿ, ಶಾಂತಿಯುತ ಮತ್ತು ಆರೋಗ್ಯಯುತ ವಾತಾವರಣ ಹೊಂದಿರುವುದರಿಂದ ಆರೋಗ್ಯ ಕಾಪಾಡಲು ಜಾಗಿಂಗ್ ಹೋಗುವವರಿಗೂ ಕೂಡ ಈ ಸ್ಥಳ ನೆಚ್ಚನದಾಗಿದೆ. ಇಲ್ಲಿ ಸಾಕಷ್ಟು ಆಹಾರ ಮಳಿಗೆಗಳಿವೆ, ಬೇಕಾದ ವಿವಿಧ ರೀತಿಯ ಆಹಾರಗಳನ್ನು ಪ್ರವಾಸಿಗರಿಗೆ ನೀಡುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri