ಉಮ್ರಂಗ್ಶು 196 ಕಿ.ಮೀ ದೂರದಲ್ಲಿರುವ ಗಿರಿಧಾಮವಾಗಿದ್ದು ಅಸ್ಸಾಂ ಮತ್ತು ಮೇಘಾಲಯಗಳ ಗಡಿಯಲ್ಲಿದೆ ಹಾಗೂ ಪ್ರವಾಸಿಗರಲ್ಲಿ ಪ್ರಸಿದ್ಧವಾಗಿದೆ. ಕೆಳಗಡೆ ಇರುವ ಕಣಿವೆಗಳು ಮತ್ತು ಮೇಲ್ಭಾಗದಲ್ಲಿ ಕಾಣುವ ಕಚಾರ್ ಬೆಟ್ಟಗಳ ಸೊಬಗು ನಿಮ್ಮ ರಜಾ ದಿನಗಳನ್ನು ಮರೆಯಲಾಗದಂತೆ ಮಾಡುತ್ತದೆ. ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ ಬಿಸಿನೀರಿನ ಚಿಲುಮೆ ಇದರಲ್ಲಿ ಔಷಧೀಯ ಮೌಲ್ಯಗಳಿವೆ ಎಂದು ನಂಬಲಾಗಿದೆ.
ಈಶಾನ್ಯ ವಿದ್ಯುತ್ ನಿಗಮ (ನಾರ್ಥ್ ಈಸ್ಟ್ ಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ (NEEPCO)) ನ ಅಡಿಯಲ್ಲಿ ಇರುವ ಜಲವಿದ್ಯುತ್ ಸ್ಥಾವರ ಈಶಾನ್ಯ ರಾಜ್ಯಗಳ ಅತ್ಯಂತ ದೊಡ್ಡ ಜಲವಿದ್ಯುತ್ ಸ್ಥಾವರವಾಗಿದೆ. ಕೊಪಿಲಿ ನದಿಯಲ್ಲಿ ಜಲಾಶಯವನ್ನು ಕಟ್ಟಲಾಗಿದೆ. ಇಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಇದ್ದು ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವುದರಲ್ಲಿ ಇರುವ ಮಜವೇ ಬೇರೆ.