ಮೈಬೊಂಗ್ ಸಿಲ್ಚರ್ ನಿಂದ 137 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಗಿರಿಧಾಮವಾಗಿದೆ ಹಾಗೂ ಇದನ್ನು ರಸ್ತೆ ಮಾರ್ಗವಾಗಿ ತಲುಪಬಹುದಾಗಿದೆ. ದಿಮಾಸಾ ಭಾಷೆಯಲ್ಲಿ ಈ ಸ್ಥಳದ ಹೆಸರಿನ ಅರ್ಥ ಬೇಕಾದಷ್ಟು ಅಕ್ಕಿ ಎಂಬುದಾಗಿದೆ. ಇದು ಕಚಾರಿ ಮತ್ತು ದಿಮಾಸಾ ರಾಜ್ಯ ವಂಶದ ರಾಜಧಾನಿಯಾಗಿತ್ತು ಹಾಗೂ ಮಹುರ್ ನದಿಯ ದಂಡೆಯ ಮೇಲಿರುವ ಈ ನಗರ ಬಹಳ ಸುಂದರವಾದ ನಗರವಾಗಿದೆ. ಒಂದು ಕಾಲದಲ್ಲಿ ಇಲ್ಲಿ ಆಳ್ವಿಕೆ ನಡೆಸಿದ ರಾಜರ ನೆನಪನ್ನು ನಗರದ ಒಂದು ಸುತ್ತು ನಿಮಗೆ ತರದೆ ಇರುವುದಿಲ್ಲ.
ಗಿರಿಧಾಮದ ದಕ್ಷಿಣ ಭಾಗದಲ್ಲಿರುವ ಹಳೆಯ ರಾಜವಂಶದ ಪಳೆಯುಳಿಕೆಗಳು ಇಲ್ಲಿನ ಮಹತ್ವದ ಆಸ್ತಿಗಳಾಗಿವೆ. ಲೊಗ್ತೈನ್ ನೋಹ್ ದೇವಾಲಯ ಹಾಗೂ 12 ನೆಯ ಶತಮಾನದಲ್ಲಿ ಕಟ್ಟಲಾದ ಏಕಶಿಲಾ ದೇವಾಲಯವಾದ ರಾಮಚಂದಿ ದೇವಾಲಯವನ್ನು ಇಲ್ಲಿ ಬಂದಾಗ ನೀವು ಭೇಟಿ ನೀಡಲೇ ಬೇಕು. ಇದರ ಜೊತೆಗೆ ಇಲ್ಲೇ ಆಸುಪಾಸಿನಲ್ಲಿ ಹಲವು ಜಲಪಾತಗಳಿವೆ ಹಾಗೂ ಮೈಬೊಂಗ್ ಜಲಪಾತ ಅವುಗಳಲ್ಲಿ ಪ್ರಸಿದ್ಧವಾಗಿದೆ.


Click it and Unblock the Notifications