ರಾಮ್ಗಡ್ ಪಟ್ಟಣವು ಸಿಕರ್ ನಿಂದ 74 ಕಿ.ಮೀ ದೂರದಲ್ಲಿದೆ. ಈ ಪಟ್ಟಣವನ್ನು ರಾವ್ ರಾಜಾ ದೇವಿ ಸಿಂಗ್ 1791 ರಲ್ಲಿ ಸ್ಥಾಪಿಸಿದ್ದಾರೆ. ಈ ಸ್ಥಳವು ಸ್ಮಾರಕ ಸಮಾಧಿ, ಹವೇಲಿಗಳು, ದೇವಸ್ಥಾನಗಳು ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳಿಗಾಗಿ ಪ್ರಸಿದ್ಧವಾಗಿದೆ. ಪ್ರವಾಸಿಗರು ಇಲ್ಲಿ ರಾಮ್ ಗೋಪಾಲ್ ಪೊದ್ದಾರ್ ಸ್ಮಾರಕ ಸಮಾಧಿ, ತಾರಾ ಚಂದ್ ಘನ್ಶ್ಯಾಮ್ ದಾಸ್ ಪೊದ್ದಾರ್ ಹವೇಲಿ, ಬೈಜ್ ನಾಥ್ ರುಹಿಯಾ ಹವೇಲಿ, ರಾಮ್ ಗೋಪಾಲ್ ಪೊದ್ದಾರ್ ಹವೇಲಿ ಮತ್ತು ಗೋಪಿ ರಾಮ್ ಬಗಾರಿಯಾ ಹವೇಲಿಗಳನ್ನು ನೋಡಬಹುದಾಗಿದೆ. ಇವುಗಳ ಹೊರತಾಗಿ ಇಲ್ಲಿರುವ ಮೋತಿಲಾಲ್ ಸನ್ವೈಕಾ ಹವೇಲಿ, ಶನಿ ದೇವ್ ದೇವಸ್ಥಾನ, ಗಂಗಾ ದೇವಸ್ಥಾನ, ಬಾಲಾಜಿ ದೇವಸ್ಥಾನ ಮತ್ತು ಮನ್ ಜಿ ಖೆಮ್ಕಾ ಹವೇಲಿಗ್ಳೂ ಕೂಡ ಭೇಟಿ ನೀಡಬಹುದಾದ ಸ್ಥಳಗಳಾಗಿವೆ.


Click it and Unblock the Notifications