ಜೀನ ಮಾತಾ ದೇವತೆಗೆ ಸಮರ್ಪಿತವಾದ ಪ್ರಾಚೀನ ದೇವಸ್ಥಾನದಿಂದಾಗಿ ಜೀನ್ ಮಾತಾ ಹಳ್ಳಿಯು ಪ್ರಸಿದ್ಧವಾಗಿದೆ. ಈ ದೇವಸ್ಥಾನದ ನಿರ್ಮಾಣವು 1000 ವರ್ಷಗಳ ಹಿಂದೆ ಆಗಿದೆ ಎನ್ನಲಾಗುತ್ತದೆ. ಈ ದೇವಸ್ಥಾನದ ವಾಸ್ತುಶಿಲ್ಪವು ರಜಪೂತ್ ಶೈಲಿಯನ್ನು ಅನಾವರಣಗೊಳಿಸುತ್ತದೆ. ಈ ದೇವಸ್ಥಾನದ 24 ಸುಂದರವಾದ ಖಂಬಗಳ ಮೇಲೆ ವಿವಿಧ ರಚನೆಗಳನ್ನು ಕೆತ್ತಲಾಗಿದೆ. ಸಂದರ್ಶಕರು ಇಲ್ಲಿ ಎಂಟು ಕೈ ಹೊಂದಿರುವ ಜೀನ್ ಮಾತಾಳ ವಿಗ್ರಹವನ್ನು ನೋಡಬಹುದಾಗಿದೆ. ನವರಾತ್ರಿ ಸಮಯದಂದು ಇಲ್ಲಿ ಜರುಗುವ ಉತ್ಸವದಲ್ಲಿ ಬಹುಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.


Click it and Unblock the Notifications