ಚಾರಣ, ಶಿಮ್ಲಾ

ಚಾರಣವು ಶಿಮ್ಲಾದ ಸೊಬಗನ್ನು ಆಸ್ವಾದಿಸಲು ಇರುವ ಒಂದು ಅಪೂರ್ವವಾದ ಅವಕಾಶವಾಗಿದೆ. ಶಿಮ್ಲಾದಿಂದ ತತ್ತಪನಿ, ಜುಂಗ, ಚೈಲ್, ಚುರ್ ಧಾರ್, ಶಾಲಿ ಪರ್ವತ, ಹಟು ಪರ್ವತಗಳನ್ನು ಚಾರಣದ ಮೂಲಕ ತಲುಪಬಹುದು. ಕುಲುಯಿಂದ ಶಿಮ್ಲಾಗೆ ಎರಡು ಚಾರಣದ ಮಾರ್ಗಗಳು ಇವೆ. ಒಂದು ಸಮುದ್ರ ಮಟ್ಟದಿಂದ 3300 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಜಲೊರಿ ಪಾಸ್‍ನಿಂದ ಇದ್ದರೆ, ಮತ್ತೊಂದು ಸಮುದ್ರ ಮಟ್ಟದಿಂದ 3250 ಮೀಟರ್ ಎತ್ತರದಲ್ಲಿರುವ ಬಾಷ್ಲೆವ್ ಪಾಸ್ ಮೂಲಕ ಹಾದು ಬರುತ್ತದೆ.

Please Wait while comments are loading...