ಪಾಟ್ಟರ್ ಪರ್ವತವು ಬೇಸಿಗೆ ಬೆಟ್ಟದಿಂದ ಒಂದು ಕಿ.ಮೀ ದೂರದಲ್ಲಿದೆ. ಪ್ರಾಕೃತಿಕ ಸೊಬಗನ್ನು ಹೊಂದಿರುವ ಈ ಬೆಟ್ಟವು ಒಂದು ಸುಂದರವಾದ ವಿಹಾರ ತಾಣವಾಗಿದೆ. ಪ್ರವಾಸಿಗರು ಇಲ್ಲಿ ಒಂದು ಜೈವಿಕ ಉದ್ಯಾನವನವನ್ನು ನೋಡಬಹುದು. ಪಾಟ್ಟರ್ ಪರ್ವತ ರೆಸಾರ್ಟಿನ ಕ್ಯಾಂಪ್ ಸಾಹಸ ಪ್ರಿಯರಿಗೆ ಚಾರಣ, ಶಿಲಾರೋಹಣ,ರಾಫ್ಫೆಲಿಂಗ್ನಂತಹ ಚಟುವಟಿಕೆಗಳನ್ನು ಕೈಗೆಟುಕುವ ದರದಲ್ಲಿ ಅನುಭವಿಸುವ ಅವಕಾಶವನ್ನೊದಗಿಸುತ್ತದೆ. ಇಲ್ಲಿ ಪಕ್ಷಿ ವೀಕ್ಷಣೆಯು ಸಹ ಒಂದು ಜನಪ್ರಿಯ ಚಟುವಟಿಕೆಯಾಗಿದೆ.