1904ರಲ್ಲಿ ಸ್ಥಾಪನೆಗೊಂಡ ಗೋರ್ಟನ್ ಕ್ಯಾಸ್ಟಲ್ ಎಂಬ ಕಟ್ಟಡವು ಗೋಥಿಕ್ ಶೈಲಿಯಲ್ಲಿದೆ. ಈ ಕಟ್ಟಡವನ್ನು ಬ್ರಿಟೀಷ್ ವಾಸ್ತು ಶಿಲ್ಪಿಯಾದ ಸರ್ ಸ್ವಿಂಟನ್ ಜಾಕೋಬ್ ಸ್ಥಾಪಿಸಿದರು. ಅಲ್ಲದೆ ಇದು ಒಂದಾನೊಂದು ಕಾಲದಲ್ಲಿ ಬ್ರಿಟೀಷರ ರಾಜಧಾನಿಯಾಗಿ ಕಾರ್ಯನಿರ್ವಹಿಸಿತ್ತು. ಈ ಕಟ್ಟಡದ ಮೊಗಸಾಲೆಗಳು ಸೂಕ್ಷ್ಮವಾದ " ರಾಜಸ್ಥಾನಿ ಜಾಲಿ ( ಪರದೆ)" ಕುಸುರಿಯಿಂದ ಅಲಂಕೃತಗೊಂಡಿದೆ. ಈ ಕ್ಯಾಸ್ಟಲ್ ಮೂರು ಅಂತಸ್ತಿನ ಕಟ್ಟಡವಾಗಿದ್ದು, 125 ಕೋಣೆಗಳನ್ನು ಹೊಂದಿದೆ.
ಬ್ರಿಟೀಷರ ಕಾಲದಲ್ಲಿ ನಾಗರೀಕ ಸಚಿವಾಲಯದ ಕಚೇರಿಯಾಗಿ ಕಾರ್ಯನಿರ್ವಹಿಸಿದ ಈ ಕಟ್ಟಡವು ಇಂದು ರಾಜ್ಯದ ಅಕೌಂಟೆಂಟ್ ಜನರಲ್ ಸಂಜೌಲಿ ಸ್ಟೋನ್‍ರವರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇವರು ಇದನ್ನು ಇತ್ತೀಚೆಗೆ ನವೀಕರಣ ಮಾಡಿದ್ದಾರೆ. ಇದಕ್ಕೆ ಅಂಡಮಾನ್‍ನಿಂದ ತರಿಸಲಾದ ರೋಸ್ ವುಡ್ಡನ್ನು ಹಾಕಲಾಗಿದೆ ಹಾಗು ಹಳೆಯ ಕೆಂಪು ಹೆಂಚನ್ನು ತೆಗೆದು, ಕೆಂಪಾದ ಕಬ್ಬಿಣದ ಶೀಟ್ ಚಾವಣಿಯನ್ನು ಹಾಸಲಾಗಿದೆ.


Click it and Unblock the Notifications