ಎಲಿಸಿಯಮ್ ಪರ್ವತವು ಸಮುದ್ರ ಮಟ್ಟದಿಂದ ಸುಮಾರು 7400 ಅಡಿ ಎತ್ತರದಲ್ಲಿ ನೆಲೆಗೊಂಡಿದ್ದು, ಶಿಮ್ಲಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಮನಮೋಹಕ ತಾಣವು ಲಕ್ಕರ್ ಬಜಾರ್ ಕಡೆಗೆ ಸಾಗುವ ಹಾದಿಯಲ್ಲಿ ನೆಲೆಗೊಂಡಿದೆ. ಲಾರ್ಡ್ ಆಕ್‍ಲ್ಯಾಂಡ್‍ರ ನಿವಾಸವಾಗಿದ್ದ ಆಕ್‍ಲ್ಯಾಂಡ್ ಹೌಸ್ ಇಲ್ಲಿಯೆ ನೆಲೆಗೊಂಡಿದೆ. ಇವರು ವಸಾಹತು ಶಾಹಿ ಭಾರತದ ವೈಸ್ ರಾಯ್ ಆಗಿದ್ದರು. ದಾಖಲೆಗಳ ಪ್ರಕಾರ ಇವರು ಇದನ್ನು 1836ರಲ್ಲಿ ಖರೀದಿಸಿ, ಬಾಲಕಿಯರ ಶಾಲೆಯಾಗಿ ಪರಿವರ್ತಿಸಿದ್ದರು. ಅದಕ್ಕೆ ಆಕ್‍ಲ್ಯಾಂಡ್ ಹೌಸ್ ಶಾಲೆ ಎಂದೆ ಹೆಸರಿತ್ತು. ಸ್ಟರ್ಲಿಂಗ್ ಕ್ಯಾಸ್ಟಲ್ ಸಹ ಇಲ್ಲಿಯೇ ನೆಲೆಗೊಂಡಿದೆ. ಇದು ಸ್ಥಳೀಯ ನಿರಾಶ್ರಿತ ಟಿಬೇಟಿಯನ್ ಮಕ್ಕಳಿಗೆ ಆಶ್ರಯವನ್ನು ಒದಗಿಸಿದೆ.


Click it and Unblock the Notifications