ದರ್ಲಘಾಟ್, ಶಿಮ್ಲಾ

ದರ್ಲಘಾಟ್ ಎಂಬುದು ಶಿಮ್ಲಾದಿಂದ 35 ಕಿ.ಮೀ ದೂರದಲ್ಲಿರುವ ಒಂದು ಪ್ರಸಿದ್ಧ ವನ್ಯಧಾಮವಾಗಿದೆ. ಇದು ಶಿಮ್ಲಾ-ಬಿಲಾಸೌರ್ ರಸ್ತೆಯಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಇಲ್ಲಿ ಕಪ್ಪು ಕರಡಿಗಳನ್ನು, ಸಾಂಬಾಲ್‍ಗಳನ್ನು, ಕಾಡು ಹಂದಿ, ಕೆಂಪು ಕಾಡು ಕೋಳಿ, ಬೊಗಳುವ ಜಿಂಕೆಗಳನ್ನು ಮತ್ತು ವಿವಿಧ ಬಗೆಯ ವಲಸೆ ಹಕ್ಕಿಗಳನ್ನು ಕಾಣಬಹುದು. ಹಿಮಾಚಲ್ ಪ್ರದೇಶ್ ಪ್ರವಾಸೋದ್ಯಮ ಇಲಾಖೆಯು ಇಲ್ಲಿಗೆ ಹಲವಾರು ಜೈವಿಕ- ಚಾರಣಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ. ಈ ವನ್ಯಧಾಮಕ್ಕೆ ಭೇಟಿಕೊಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಎಪ್ರಿಲ್‍ವರೆಗಿನ ಅವಧಿ ಅತ್ಯುತ್ತಮವಾಗಿದೆ.

Please Wait while comments are loading...