ಸವಾಯಿ ಮಾನ್ ಸಿಂಗ್ ವನ್ಯಧಾಮವು ಸವಾಯಿ ಮಾಧೊಪುರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ವನ್ಯಜೀವಿಧಾಮವು ಅರಾವಳಿ ಮತ್ತು ವಿಂಧಾಯನ್ ಬೆಟ್ಟಗಳು ಕೂಡುವ ಸ್ಥಳದಲ್ಲಿ ನೆಲೆಸಿದೆ. ನಗರದ ಕೇಂದ್ರ ಭಾಗದಿಂದ 9 ಕಿ.ಮೀ ಗಳಷ್ಟು ದೂರದಲ್ಲಿರುವ ಈ ವನ್ಯಜೀವಿಧಾಮವು, ವಿವಿಧ ಬಗೆಯ ಅಪರೂಪದ ಪ್ರಾಣಿ ಮತ್ತು ಸಸ್ಯ ಸಂಪತ್ತಿಗೆ ಆಶ್ರಯ ನೀಡಿರುವ ಹೆಗ್ಗಳಿಕೆಯನ್ನು ಹೊಂದಿದೆ.
ಸವಾಯಿ ಮಾನ್ ಸಿಂಗ್ ವನ್ಯಜೀವಿಧಾಮದಲ್ಲಿ ಸಿರಸ್, ಜಮುನ್, ಕಡಯ, ಅಮಲ್ತಸ್, ಕದಂಬ್, ಗೋಯ ಖೈರ್, ಖಾಯಿರ್, ಚೀಲ, ರೌನಿ, ಟೆಂಡು, ಗುರ್ಜನ್, ಖಿರ್ನಿ, ಸಲಾರ್, ಕಠ್ ಪಾಡಿ ಮತ್ತು ಸೈಂತಗಳಂತಹ ವಿವಿಧ ಬಗೆಯ ವೃಕ್ಷ ಸಂಪತ್ತನ್ನು ಹೊಂದಿದೆ. ಈ ವೃಕ್ಷ ಸಂಪತ್ತಿನ ಜೊತೆಗೆ ಈ ವನ್ಯಜೀವಿಧಾಮವು ವಿಪುಲವಾದ ಪ್ರಾಣಿ ಸಂಪತ್ತಿನ ಆಗರವನ್ನು ಹೊಂದಿದ್ದು, ವನ್ಯ ಜೀವಿ ಪ್ರಿಯರನ್ನು ಕೈ ಬೀಸಿಕರೆಯುತ್ತದೆ.ಇಲ್ಲಿ ಬೆಕ್ಕಿನ ಜಾತಿಗೆ ಸೇರಿದ ಕಾಡು ಬೆಕ್ಕುಗಳು ಚಿರತೆಗಳ ಜೊತೆಗೆ ಚಿಂಕರ, ನೀಲ್ ಗಾಯ್, ಕಾಡು ಹಂದಿಗಳು, ಚಿತಲ್ ಗಳು, ಗುಳ್ಳೆನರಿಗಳು, ಮೊಲಗಳು, ಕತ್ತೆ ಕಿರುಬಗಳು ಮತ್ತು ಸಾಂಬರ್ ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ಈ ಕಾಡು ಕ್ವೇಯಿಲ್ , ಮಿನಿವೆಟ್, ರಣಹದ್ದು, ನೊಣ ಹಿಡುಕಗಳು , ಮರಳುವಕ್ಕಿಗಳು, ನವಿಲುಗಳು,ಓರಿಯಲ್( ಕಾಮಾಲೆ ಹಕ್ಕಿ), ಗಿಳಿಗಳು, ಗುಬ್ಬಿಗಳು ಮತ್ತು ಕಲ್ಲಿನ ಕರ್ಲ್ಯು ಪಕ್ಷಿಗಳನ್ನು ಹೊಂದಿದೆ.


Click it and Unblock the Notifications