ತೋಸೆಘರ ಜಲಪಾತ ಪ್ರವಾಸಿಗರಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಸತಾರಾದಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ಮಳೆಗಾಲದಲ್ಲಿ ನಯನಮನೋಹರವಾಗಿ ಗೋಚರಿಸುತ್ತದೆ.
ಇಲ್ಲಿನ ತಣ್ಣನೆಯ ಪರಿಸರದಲ್ಲಿ ಸುಂದರವಾದ ಜಲಪಾತದಿಂದ ನೀರು ಧುಮ್ಮಿಕ್ಕುವಾಗ ಚಿಮ್ಮುವ ನೀರಿನ ಸ್ಪರ್ಷವನ್ನು ಅನುಭವಿಸಿಯೆ ಆನಂದಿಸಬೇಕು.