ಸತಾರಾ ಜಿಲ್ಲೆಯಿಂದ 22 ಕಿ.ಮೀ ದೂರವಿರುವ ಕೌಸ್ ಸರೋವರ ಮತ್ತು ಕೌಸ್ ಪ್ರಸ್ಥಭೂಮಿಗಳು ಪ್ರವಾಸಿಗರನ್ನು ಅತ್ಯಾಕರ್ಷಿಸುತ್ತವೆ. ಇವು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಈ ಸ್ಥಳವನ್ನು 'ಪುಷ್ಪಗಳ ಪ್ರಸ್ಥಭೂಮಿ' ಎಂದೂ ಸಹ ಕರೆಯಲಾಗುತ್ತದೆ.
3,500 ಅಡಿ ಎತ್ತರದಲ್ಲಿರುವ ಕೌಸ್ ಪ್ರಸ್ಥಭೂಮಿಯನ್ನು 150 ವರ್ಷಗಳ ಹಿಂದೆ ಅಂದರೆ ಸುಮಾರು 1844 ರಲ್ಲಿ ನಿರ್ಮಿಸಲಾಯಿತು. ಕೊಯ್ನಾ ವನ್ಯಮೃಗ ಅಭಯಾರಣ್ಯವನ್ನೂ ಇಲ್ಲಿ ನೋಡಬಹುದಾಗಿದ್ದು, 400 ಕ್ಕೂ ಹೆಚ್ಚು ಪ್ರಭೇಧಗಳ ವಿಧವಿಧವಾದ ಗಿಡಗಳು, ಪೊದೆಗಳು ಮತ್ತು ಆರ್ಕಿಡ್ಗಳಂತಹ ಅನೇಕ ಸಸ್ಯಗಳನ್ನು ಇಲ್ಲಿ ಕಾಣಬಹುದು.
ಕೌಸ್ ಸರೋವರ ಸತಾರಾ ನಗರದ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಈ ಸ್ಥಳಕ್ಕೆ ವಿಶೇಷವಾಗಿ ಮಳೆಗಾಲದ ನಂತರದ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ.