ಉಷಾಕೋಟಿಯು ವನ್ಯಜೀವಿಧಾಮವಾಗಿದ್ದು 1962ರಲ್ಲಿ ಸ್ಥಾಪಿತವಾಯಿತು. ಇದು 300 ಚದರ ಕಿಮೀ ವಿಸ್ತೀರ್ಣದಲ್ಲಿನ ಕಾಡಾಗಿದ್ದು ಸಸ್ಯ ಮತ್ತು ಜೀವ ವೈವಿಧ್ಯದಿಂದ ಕೂಡಿದೆ. ದೆಬಿಗರ್ ವನ್ಯಜೀವಿ ಧಾಮದಂತೆಯೇ ಇದು ಹಿರಾಕುಡ್ ಅಣೆಕಟ್ಟಿನಿಂದಾಗಿ ಮಹಾನದಿಯ ನೀರಿನ ಸೌಲಭ್ಯವನ್ನು ಪಡೆದಿದೆ.
ಇಲ್ಲಿ ಗಂಧದ ಮರ, ಬೇವಿನ ಮರ, ಅಕೇಷಿಯ, ಕಾಸುಅರಿನಾಸ್, ಸಾಲ್ ಮತ್ತು ಅರ್ಜುನ ರೀತಿಯ ವಿವಿಧ ಬಗೆಯ ಮರಗಳಿವೆ. ಸುಮಾರು 35 ಆನೆಗಳು, 15 ಹುಲಿಗಳು ಇಲ್ಲಿದ್ದು ಇವುಗಳನ್ನು ಅಡವಿಗಳ್ಳರಿಂದ ಸಂರಕ್ಷಿಸಲಾಗಿದೆ. ಇದಲ್ಲದೆ ಇಲ್ಲಿ ಚಿರತೆಗಳು, ಕಾಡೆಮ್ಮೆಗಳು, ಸಾಂಬಾರು ಜಿಂಕೆಗಳು ಕೂಡ ಇವೆ. ವನ್ಯಜೀವಿ ಪ್ರೇಮಿಗಳು ಭೇಟಿ ನೀಡಲೇ ಬೇಕಾದ ತಾಣವಿದು. ಇಲ್ಲಿ ಉಳಿದುಕೊಳ್ಳಲು ಎರಡು ಕೋಣೆಗಳ ಒಂದೇ ಒಂದು ಕಾಟೇಜ್ ಲಭ್ಯವಿದ್ದು ಇಲ್ಲಿ ತಂಗಲು ಸಂಬಲ್ಪುರ ಅರಣ್ಯ ವಿಭಾಗಾಧಿಕಾರಿಗಳ ಅನುಮತಿ ಅತ್ಯಗತ್ಯ.


Click it and Unblock the Notifications