ಮಹಾನದಿಯೆಂದರೆ “ದೊಡ್ಡ ನದಿ” ಎಂದರ್ಥ. ಈ ನದಿಯ ಒಟ್ಟು ವಿಸ್ತೀರ್ಣ 858 ಕಿಮೀ. ಇದು ನಿಜಕ್ಕೂ ದೊಡ್ಡ ನದಿಯೇ. ಛತ್ತೀಸಗಢ ಮತ್ತು ಒಡಿಸ್ಸಾ ರಾಜ್ಯಗಳು ತಮ್ಮ ದೈನಂದಿನ ಬದುಕಿಗೆ ಈ ನದಿಯನ್ನೇ ಅವಲಂಭಿಸಿದೆ. ಈ ನದಿಯಲ್ಲಿ ಹಲವು ಅಣೆಕಟ್ಟುಗಳು ನಿರ್ಮಾಣವಾಗುತ್ತಿರುವುದರಿಂದ ನದಿಯ ಎಲ್ಲ ಭಾಗಗಳು ದೋಣಿ ವಿಹಾರಕ್ಕೆ ಮುಕ್ತವಾಗಿಲ್ಲ.
ಈ ನದಿಯು ಮಳೆಗಾಲದಲ್ಲಿ ಮೈದುಂಬಿರುತ್ತದೆ. ಉಳಿದಂತೆ ಈ ನದಿಯ ಎರಡೂ ದಂಡೆಗಳಲ್ಲಿ ಮರಳು ಹಾಸು ತುಂಬಿರುತ್ತದೆ. ನದಿಯ ಫಲವತ್ತ ಮಣ್ಣಿನಿಂದಾಗಿ ಸುತ್ತಲು ಹಸಿರು ತುಂಬಿರುತ್ತದೆ. ನೋಡಲು ನಯನಮನೋಹರವಾಗಿರುತ್ತದೆ. ಮಳೆಗಾಲದಲ್ಲಿ ಇದು ಗಂಗೆಯಷ್ಟೇ ಮೈದುಂಬಿ ಹರಿಯುವುದನ್ನು ನೋಡಬಹುದು. ಛಾಯಾಗ್ರಾಹಕರಿಗಂತೂ ಇದು ಕನಸಿನ ಸ್ವರ್ಗವೇ ಸರಿ.


Click it and Unblock the Notifications