ಪ್ರಪಂಚದ ಏಕೈಕ ಬಾಗಿದ ದೇವಾಲಯವಿದು. ಇದು ಸಂಬಲ್ಪುರದ ದಕ್ಷಿಣಕ್ಕೆ 23 ಕಿಮೀ ದೂರದಲ್ಲಿ ಮಹಾನದಿಯ ದಂಡೆಯಲ್ಲಿದೆ. ಇದು ಶಿವನ ದೇವಾಲಯ. ಇದನ್ನು ನಿರ್ಮಿಸಿದಾತ ಒಬ್ಬ ಹಾಲುಮಾರುವಾತ. ಈತ ಪ್ರತಿದಿನ ಮಹಾನದಿಯನ್ನು ದಾಟಿ ಬರುತ್ತಿದ್ದನಂತೆ. ಹೀಗೆ ನದಿಯನ್ನು ದಾಟಿ ಬಂದು ಶಿವನನ್ನು ಪೂಜಿಸಿ ಹಾಲನ್ನು ನಿವೇದಿಸುತ್ತಿದ್ದನಂತೆ. ಈ ಹಾಲನ್ನು ಅಲ್ಲಿನ ಶಿಲೆ ಕುಡಿಯುತ್ತಿತ್ತು ಎಂದು ವದಂತಿ. ಈ ವಿಷಯವು ಕ್ರಮೇಣ ಎಲ್ಲರಿಗೂ ತಿಳಿಯಿತು. ಆಗ ಗಂಗ ವಂಶಿ ರಾಜನಾದ ಮೂರನೇ ಅಂಗಭೀಮ ದೇವನು ಈ ದೇವಾಲಯವನ್ನು ನಿರ್ಮಿಸಿದನು.
ಕಾಲಾಂತರದಲ್ಲಿ ಈ ದೇವಾಲಯವನ್ನು ಹಲವು ರಾಜರು ನವೀಕರಿಸಿದರು. ಈ ದೇವಾಲಯವು ಬಾಗಿರುವುದರ ಕಾರಣ ಮಾತ್ರ ಇಂದಿಗೂ ನಿಗೂಢವಾಗಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಮೂರು ಪ್ರತ್ಯೇಕ ದೇವಾಲಯಗಳು ಮೂರು ಬೇರೆ ಬೇರೆ ದಿಕ್ಕುಗಳಲ್ಲಿದೆ.


Click it and Unblock the Notifications