ತಿರುಮನಿಮುತರ್ ನದಿಯ ಭಾಗದಲ್ಲಿರುವ ಈ ಪುರಾತನ ದೇವಸ್ಥಾನ ಸೇಲಂ ನ ಅತ್ಯಂತ ಪ್ರಾಚೀನ ದೇವಾಲಯ. ಇಲ್ಲಿ ಮರಿಯಮ್ಮ ದೇವಿಯ ವಿಗ್ರಹವಿದ್ದು ಇದು ಸೇಲಂ ಕೋಟೆಯನ್ನು ಕಾಯುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮಳೆಬಾರದ ಸಂದರ್ಭದಲ್ಲಿ ಭಕ್ತಾದಿಗಳು ಈ ದೇವಿ ಪೂಜೆಯನ್ನು ಮಾಡಿದರೆ ವರ್ಷಧಾರೆ ಆಗುವುದಾಗಿ ದೇವಿ ನುಡಿದಿದ್ದಾಳೆ ಎಂದು ಕೂಡ ಹೇಳಲಾಗುತ್ತದೆ.
ಈ ಪ್ರದೇಶವನ್ನು ಆಳುವಾಗ ಚರ ರಾಜವಂಶದವರು ಈ ದೇವಸ್ಥಾನವನ್ನು ನಿರ್ಮಿಸಿದರು. ಸೇಲಂ ಕೋಟೆಯ ಹತ್ತಿರದಲ್ಲೆ ಇದನ್ನು ಕಟ್ಟಿದ್ದರಿಂದ ಈ ದೇವಸ್ಥಾನವನ್ನು ಕೋಟೆ ದೇವಸ್ಥಾನ ಎನ್ನಲಾಯಿತು. ಪ್ರತಿವರ್ಷ ಜುಲೈ ಮತ್ತು ಆಗಸ್ಟ್ ನಲ್ಲಿ ಒಂದು ವಾರ ನಡೆಯುವ ಸೇವಾಪತ ಮರಿಯಮ್ಮನ ಜಾತ್ರೆಗೆ ನೂರಾರು ಭಕ್ತಾದಿಗಳು ಇಲ್ಲಿ ಸೇರುವುದನ್ನು ಕಾಣಬಹುದು.