ಹಿರ್ನಿ ಜಲಪಾತವು ರಾಂಚಿಯಿಂದ 80 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಹಿರ್ನಿಯು ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡಿರುವ ಮತ್ತೊಂದು ಜಲಪಾತವಾಗಿದೆ. ಕಾರ್ ಪಾರ್ಕಿಂಗ್‍ನಿಂದ ಎಡಕ್ಕೆ ಒಂದು ಕಾಲು ಹಾದಿಯ ಪಥವು ನದಿಯ ಆಚೆ ದಂಡೆಯ ಮೇಲೆ ಇರುವ ಪ್ರವಾಸಿಗರ ಕುಟೀರದತ್ತ ಸಾಗುತ್ತದೆ. ಇಲ್ಲಿಂದ ಬಲಕ್ಕೆ ಮೆಟ್ಟಿಲುಗಳನ್ನು ಹಾಕಿ ನಿರ್ಮಿಸಿರುವ ಹಾದಿಯು ಬೆಟ್ಟದ ಮೇಲಕ್ಕೆ ಸಾಗುತ್ತದೆ. ಇಲ್ಲಿರುವ ವೀಕ್ಷಣಾ ಗೋಪುರದಿಂದ ನೀವು ಧುಮ್ಮಿಕ್ಕುವ ಜಲಪಾತವನ್ನು ಮತ್ತು ಸುತ್ತಲಿನ ಕಾಡನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಇದರ ಜೊತೆಗೆ ಒಂದು ನದಿಯ ಮೇಲೆ ಒಂದು ಸೇತುವೆಯನ್ನು ಸಹ ನಿರ್ಮಿಸಲಾಗಿದೆ. 37 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ರಾಮ್‍ಗರ ನದಿಯಿಂದ ಉಂಟಾಗಿದೆ. ಇದರ ಸುತ್ತಲು ದಟ್ಟ ಅರಣ್ಯವಿದೆ.


Click it and Unblock the Notifications