Search
  • Follow NativePlanet
Share
ಮುಖಪುಟ » ಸ್ಥಳಗಳು» ರಾಮನಗರ

 ರಾಮನಗರ  - ಇದು 'ಶೋಲೆ' ಖ್ಯಾತಿಯ  ರೇಷ್ಮೆ ಸೀಮೆ!

18

 ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ಸುಮಾರು 50 ಕಿಲೋಮೀಟರು ದೂರದಲಿದ್ದು, ನೈರುತ್ಯ ದಿಕ್ಕಿನಲ್ಲಿದೆ ಹಾಗು ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಇದೂ ಕೂಡ  ಗಂಗ, ಚೋಳ, ಹೊಯ್ಸಳ ಹಾಗು ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಆದರೆ ಈ ಪಟ್ಟಣ  ಏಕಾಏಕಿ ಪ್ರಸಿದ್ದಿಗೆ ಬಂದದ್ದು ಸುಮಾರು 70ರ ದಶಕದಲ್ಲಿ ಇಲ್ಲಿ ನಡೆದ 'ಶೋಲೆ' ಚಲನ ಚಿತ್ರದ ಚಿತ್ರೀಕರಣದಿಂದ.

 

ರಾಮನಗರದ ಬೆಟ್ಟ ಪ್ರದೇಶ

ರಾಮನಗರವು, ಶಿವರಾಮಗಿರಿ, ಸೋಮಗಿರಿ, ಕೃಷ್ಣಗಿರಿ, ಯತಿರಾಜಗಿರಿ, ರೇವಣ ಸಿದ್ದೇಶ್ವರ, ಸಿಡಿಲಕಲ್ಲು ಹಾಗು ಜಲ ಸಿದ್ದೇಶ್ವರ ಎಂಬ 7 ಭವ್ಯ ಬೆಟ್ಟಗಳಿಂದ ಸುತ್ತುವರಿದಿದೆ. ಇಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಊರು  ರೇಷ್ಮೆ ನಗರವೆಂದೂ ಹೆಸರುವಾಸಿ. ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ರಾಮನಗರದ ರೇಷ್ಮೆಯನ್ನು ಬಳಸಿಯೇ ನೇಯಲಾಗುತ್ತದೆ.

 

ಪ್ರಕೃತಿ ಪ್ರೇಮಿಗಳಿಗೆ ಖುಷಿ ಕೊಡುವ ವಿಚಾರವೆಂದರೆ ಇಲ್ಲಿರುವ ಬೆಟ್ಟಗಳು ಈಗ ಅಳಿವಿನಂಚಿನಲ್ಲಿರುವ ಹಳದಿ ಕುತ್ತಿಗೆಯ ಬುಲ್ ಬುಲ್ ಹಾಗು ಉದ್ದ ಕೊಕ್ಕಿನ ರಣಹದ್ದುಗಳಿಗೆ ಮನೆಯಾಗಿರುವುದು. ಇಲ್ಲೇ ಜಾನಪದ ಲೋಕವಿದ್ದು ಕರ್ನಾಟಕದ ಜಾನಪದ ಕಲೆ ಹಾಗು ಸಂಸೃತಿಗೆ ಸಂಬಂದ್ದಪಟ್ಟ ಸಣ್ಣ ವಸ್ತು ಸಂಗ್ರಹಾಲಯವನ್ನು ಇಲ್ಲಿ ನೋಡಬಹುದು. ಈ ಪ್ರದೇಶ ಬೆಟ್ಟಗಳಿಂದ ಸುತ್ತುವರಿದಿದ್ದು ಪರ್ವತಾರೋಹಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಹಾಗು ಇದು ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಆಸರೆಯಾಗಿದೆ. ರಾಮನಗರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಇಲ್ಲಿಗೆ ಈ ಎರಡೂ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ರಾಮನಗರ ಪ್ರಸಿದ್ಧವಾಗಿದೆ

ರಾಮನಗರ ಹವಾಮಾನ

ಉತ್ತಮ ಸಮಯ ರಾಮನಗರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರಾಮನಗರ

  • ರಸ್ತೆಯ ಮೂಲಕ
    ಬೆಂಗಳೂರು ಹಾಗು ಮೈಸೂರು ನಿಂದ ಹೊರಡುವ ಬಹಳಷ್ಟು ಸರಕಾರೀ ಅಥವಾ ಖಾಸಗಿ ಬಸ್ಸುಗಳ ಮೂಲಕ ರಾಮನಗರಕ್ಕೆ ಸುಲಭವಾಗಿ ಬಂದು ಸೇರಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರಾಮನಗರ ತನ್ನದೇ ಆದ ರೈಲು ನಿಲ್ದಾಣ ಹೊಂದಿದ್ದರೂ ಎಲ್ಲಾ ಮುಖ್ಯ ನಗರಗಳಿಗೆ ಸಂಪರ್ಕ ಹೊಂದಿಲ್ಲ. ಇಲ್ಲಿಂದ 48 ಕಿಲೋಮೀಟರು ದೂರದಲ್ಲಿರುವ, ಭಾರತ ದೇಶದ ಎಲ್ಲಾ ಮುಖ್ಯ ನಗರಗಳೊಂದಿಗೆ ಸಂಪರ್ಕ ಹೊಂದಿರುವ ಬೆಂಗಳೂರು ರೈಲು ನಿಲ್ದಾಣವೇ ಅತಿ ದೊಡ್ಡ ರೈಲು ನಿಲ್ದಾಣ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ, ಅಥವಾ ಬಸ್ಸಿನ ಮೂಲಕ ರಾಮನಗರ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರಾಮನಗರಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ದೇಶೀ ಹಾಗು ವಿದೇಶೀ ಪ್ರಯಣಿಕರಿಬ್ಬರಿಗೂ ಅನುಕೂಲಕರವಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ರಾಮನಗರದಿಂದ ಸುಮಾರು 65 ಕಿಲೋಮೀಟರು ದೂರದಲ್ಲಿದ್ದು ಯೂರೋಪ್, ಏಷಿಯಾ, ಅಮೆರಿಕ ಹಾಗು ಮದ್ಯ ಪ್ರಾಚ್ಯ ದೇಶಗಳಿಗೆ ಸಂಪರ್ಕಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu