ಪರ್ವತಾರೋಹಣ, ರಾಮನಗರ

ಪರ್ವತಾರೋಹಣಣಕ್ಕೆ ರಾಮನಗರ ಸಾಕಷ್ಟು ಹೆಸರುವಾಸಿಯಾಗಿದ್ದು, ಸಾಹಸಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣ. ಈ ಸ್ಥಳವು ಬೆಂಗಳೂರಿನಿಂದ  ಸುಮಾರು 48 ಕಿಲೋಮೀಟರು ದೂರದಲ್ಲಿದು, ಕಡಿದಾದ ಬೆಟ್ಟ ಹಾಗು ಕಣಿವೆಗಳಿಂದ ಕೂಡಿದೆ. ಅಸಲಿಗೆ ರಾಮನಗರವು ದಕ್ಷಿಣ ಭಾರತದ ಹಳೆಯ ಪರ್ವತಾರೋಹಣ ಸ್ಥಳವೆಂದು ಸುಮಾರು 1960 ರಿಂದಲೇ ಪ್ರಚಲಿತದಲ್ಲಿದೆ. ರಾಮದೇವರ ಬೆಟ್ಟ, SRS ಬೆಟ್ಟ, ಹಾಗು ತೆಂಗಿನಕಾಯಿ ಬೆಟ್ಟ ಇಲ್ಲಿನ ಪ್ರಮುಖ ಪರ್ವತಾರೋಹಣ ಸ್ಥಳಗಳಲ್ಲಿ ಕೆಲವು. ಇಲ್ಲಿ ಹಲವು ಅಷ್ಟೇನೂ ಕಡಿದಾಗಿರದ ಗ್ರಾನೈಟ್ ದಿಬ್ಬಗಳಿದ್ದು ಸುಲಭವಾಗಿ ಹತ್ತಬಹುದಾಗಿದೆ.

ಇಲ್ಲಿ ತುಂಬಾ ಪ್ರಸಿದ್ದವಾದ ಆರೋಹಣ ಸ್ಥಳಗಳೆಂದರೆ, "ವನಕ್ಕಲ್ ಗೋಡೆ", "ಗಬ್ಬರ್ ಕಿ ಅಸಲಿ ಪಸಂದ್", "ರೈನ್ ಬೌ ಗೋಡೆ" ಹಾಗು "ಅಣ್ಣ-ತಮ್ಮ" ಗುಡ್ಡ. ಇಲ್ಲಿ ಕೆಲವು ಮಾರ್ಗಗಳು ಹಳೆಯದಾಗಿದ್ದು ಶಿಥಿಲವಾಗಿದೆ ಅದ್ದರಿಂದ ಅವು ಆರೋಹಣಕ್ಕೆ ಯೋಗ್ಯವಾಗಿಲ್ಲದ್ದರಿಂದ ಪ್ರವಾಸಿಗರು ಬಹಳ ಎಚ್ಚರ ವಹಿಸಬೇಕು.

Please Wait while comments are loading...