ಲಖನೌ-ವಾರಣಾಸಿ ಹೆದ್ದಾರಿಯಲ್ಲಿರುವ, ಇಂದಿರಾ ಗಾಂಧಿ ಸ್ಮಾರಕ ಸಸ್ಯೋದ್ಯಾನವನ್ನು 1986 ರಲ್ಲಿ ಸ್ಥಾಪಿಸಲಾಯಿತು. 57 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಸಸ್ಯೋದ್ಯಾನ, ಸಾಯಿ ನದಿಯ ಉತ್ತರ ದಂಡೆಯಲ್ಲಿ ಸ್ಥಿತವಾಗಿದೆ. ಸ್ಮಾರಕವು ಕೇವಲ ಸಸ್ಯಗಳು, ಹೂವುಗಳು ಮತ್ತು ಭೂ ದೃಶ್ಯ ಉದ್ಯಾನವನ್ನು ಮಾತ್ರವಲ್ಲದೆ - ಇದು ಸಂಶೋಧನಾ ವಿದ್ವಾಂಸರು, ವಿಜ್ಞಾನಿಗಳು ಮತ್ತು ಸಸ್ಯ ಜೀವನದ ಬಗ್ಗೆ ಹೆಚ್ಚು ತಿಳಿಯಲು ಬಯಸುವವರಿಗೆ ಒಂದು ಶೈಕ್ಷಣಿಕ ಸಂಸ್ಥೆಯಾಗಿದೆ. ಈ ಸಸ್ಯತೋಟ ಅನೇಕ ಔಷಧೀಯ ಸಸ್ಯಗಳು ಮತ್ತು ಅಲಂಕಾರಿಕ ಸಸ್ಯಗಳ ನೆಲೆಯಾಗಿದೆ. ಒಂದು ಸ್ಥಳದಲ್ಲಿ ಸುಂದರ ಹಸಿರು ತೋಟದ ಜೊತೆಗೆ ರಾಕ್ ಗಾರ್ಡನ್ (ಕಲ್ಲಿನ ಉದ್ಯಾನ) ಗುಲಾಬಿ ಉದ್ಯಾನ, ಕಾಲೋಚಿತ ಉದ್ಯಾನ ಮತ್ತು ಒಂದು ಜಲ ತೋಟವನ್ನು ಹೊಂದಿದೆ.


Click it and Unblock the Notifications